ಜಸ್ಟ್ ನ್ಯೂಸ್

ತಾಯಿಯಾಗುವರೇ ದೀಪಿಕಾ; ವೈರಲ್ ಆದ `ದೀಪಾವಳಿ ಬಳಿಕ ಸಂಭ್ರಮ’ ಪೋಸ್ಟ್

ಮುಂಬೈ: ‘ದೀಪಾವಳಿ ಬಳಿಕ ಸಂಭ್ರಮ‘ ಎಂದು  ಜಾಲತಾಣದಲ್ಲಿ ದೀಪಿಕಾ ಪಡುಕೋಣೆ ಹಂಚಿಕೊಂಡಿರುವ ಸಂತಸಕ್ಕೆ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ!

ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೀಪಿಕಾ ಈ ವಿಷಯವನ್ನು ಇನ್ನು ಖಚಿತಪಡಿಸಿಲ್ಲ. ಆದರೆ ಅವರು ಭಾನುವಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ  ತಾವು ಮಗುವಾಗಿದ್ದಾಗಿನ ಫೋಟೊವನ್ನು ಪೊಸ್ಟ್‌ ಮಾಡಿ ದೀಪಾವಳಿ ಬಳಿಕ ಸಂಭ್ರಮ ಎಂದು  ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದ್ದು ದೀಪಿಕಾ ತಾಯಿಯಾಗಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ ಎಂದು ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ದೀಪಿಕಾ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆಗಳನ್ನು ಹೇಳುತ್ತಿದ್ದಾರೆ.

ದೀಪಿಕಾ ಮತ್ತು ಪತಿ ರಣವೀರ್ ಅವರು ಕಳೆದ ಮಾರ್ಚ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸೆರೆಸಿಕ್ಕ ದೃಶ್ಯಾವಳಿಯೊಂದರ ಪ್ರಕಾರ ದೀಪಿಕಾ ಅವರು ಗರ್ಭಿಣಿ ಎಂದು ಆಗಲೇ ಸುದ್ದಿಯೊಂದು ವೈರಲ್‌ ಆಗಿತ್ತು. . ಬಾಲಿವುಡ್‌ನ ಈ ಜೋಡಿ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು.

Comment here