Public story
ನೆಲಮಂಗಲ: ಇಲ್ಲಿನ ಪುರಸಭೆಗೆ ಸೇರಿರುವ ಬೆನಕ ಲೇಔಟ್ ಕೊಳೆತು ನಾರುತ್ತಿದ್ದರೂ ಕೇಳುವವರೇ ಇಲ್ಲವಾಗಿದ್ದಾರೆ.
ಕೊರೊನಾ ಜತೆ ಮಳೆಗಾಲದ ಡೆಂಗಿ,ಚಿಕುನ್ ಗುನ್ಯಾ ಜ್ವರ ಮತ್ತಿತರ ಸಾಂಕ್ರಾಮಿಕ ರೋಗಗಳ ಕಾರಣ ನಗರ ಸ್ವಚ್ಛತೆ ಕಡೆಗೆ ಗಮನ ನೀಡುವಂತೆ ಸರ್ಕಾರದ ಸೂಚನೆ ಇದ್ದರೂ ಇಲ್ಲಿನ ಪುರಸಭೆ ಅಧಿಕಾರಿಗಳು ತಾತ್ಸಾರ ತೋರಿದಂತೆ ಕಾಣುತ್ತಿದೆ.
ಬಡಾವಣೆಯ ಚರಂಡಿಗಳು ಮಳೆ ನೀರು ನಿಂತು ಗಬ್ಬು ವಾಸನೆ ಹೊಡೆಯುತ್ತಿವೆ. ಸೊಳ್ಳೆಗಳು ತಾಂಡವವಾಡುತ್ತಿವೆ. ಈ ಬಗ್ಗೆ ಗೊತ್ತಿದ್ದು ಗೊತ್ತಿಲ್ಲದಂತೆ ಅಡಳಿತ ವರ್ತಿಸುತ್ತಿದೆ.
ಬಡಾವಣೆಯಲ್ಲಿ ಸೊಳ್ಳೆಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ರೋಗ ರುಜಿನಗಳು ಹೆಚ್ಚಾಗುತ್ತಿವೆ. ಪುರಸಭೆ ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.
ಸ್ವಚ್ಛ ನೆಲಮಂಗಳ ಯೋಜನೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆಯಾದರೂ ಇಂಥ ನಿರ್ಲಕ್ಷ್ಯಗಳಿಂದಾಗಿ ಪುರಸಭೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.