Thursday, June 20, 2024
Google search engine
HomeUncategorizedರಾಮಾಯಣದ ಶ್ರವಣಕುಮಾರ ಬಂದಿದ್ದ ಊರೇ ನಮ್ಮೂರು ವಜ್ರ

ರಾಮಾಯಣದ ಶ್ರವಣಕುಮಾರ ಬಂದಿದ್ದ ಊರೇ ನಮ್ಮೂರು ವಜ್ರ

ಶಿಲ್ಪಾ ಎಂ.ತಾರೀಕಟ್ಟೆ


ದಶರಥನ ಬಿಲ್ಲಿಗೆ ಪ್ರಾಣಬಿಟ್ಟ ಶ್ರವಣಕುಮಾರನ ಕತೆ ಗೊತ್ತಲ್ಲ. ತಂದೆತಾಯಿಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಆತ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಅಡ್ಡೆಯಲ್ಲಿ ಅವರಿಬ್ಬರನ್ನು ಹೊತ್ತುಕೊಂಡು ಹೋಗುತ್ತಿದ್ದ.ತಾಯಿಗೆ ನೀರಡಿಕೆಯಾದಾಗ ಕಾಡಿನಲ್ಲಿ ಹುಡುಕುತ್ತಾ ಬಂದು ಇಲ್ಲಿ ನೀರು ಮೊಗೆಯುತ್ತಿದ್ದ. ಯಾವುದೋ ಪ್ರಾಣಿ ಇರಬಹುದು ಎಂದು ದಶರಥ ಬಾಣ ಹೂಡಿ ಶ್ರವಣನನ್ನು ಕೊಲ್ಲುತ್ತಾನೆ.ಶ್ರವಣ ಕಾಲಿಟ್ಟ ಊರೇ ದಶರಥ ರಾಮೇಶ್ವರ ವಜ್ರ ಎಂಬ ಐತಿಹ್ಯವಿದೆ. ಹೀಗಾಗಿ ಈ ಸ್ಥಳಕ್ಕೂ ರಾಮಾಯಣಕ್ಕೂ ತುಂಬಾ ಹತ್ತಿರವಾದ ನಂಟಿದೆ.ಹನುಮಂತ ಸುಗ್ರೀವರು ವಾನರ ಸೇನೆ ಯಾವಗಲೂ ರಾಮನ ಸಹಾಯಕ್ಕೆ ಮತ್ತು ಭಕ್ತರಾಗಿ ಇರುತ್ತಿದ್ದರು ಎನ್ನುವುದಕ್ಕೆ ವಜ್ರ ಸಾಕ್ಷಿಯಾಗಿದೆ. ಭಕ್ತರು ಕಾಲಿಟ್ಟಕ್ಷಣ ಸ್ವಾಗತಿಸುವವರು ಮತ್ತು ಕಣ್ಣಿಗೆ ಕಾಣುವವರು ವಾನರ ಸೇನೆ.ಅಂಗೆ ಮುಂದೆ ಸಾಗಿದರೆ ಸುತ್ತಲೂ ಬೆಟ್ಟ. ಕಾಡು. ಅದರ ಮಧ್ಯ ಅಲ್ಲೊಂದು ನೀರಿನ ಹೊಂಡ. ಅಲ್ಲಿ ಶ್ರವಣಕುಮಾರ ತನ್ನ ತಂದೆ ತಾಯಿಗೆ ನೀರು ತರಲು ಬಂದು ದಶರಥನ ಬಿಲ್ಲಿನ ಗುರಿಗೆ ಪ್ರಾಣ ಬಿಟ್ಟಿದ್ದಾನೆ ಎನ್ನುವ ಸಾಕ್ಷಿಯಾಗಿ ಶ್ರವಣಕುಮಾರ ತನ್ನ ತಂದೆ ತಾಯಿ ಹೊತ್ತುಕೊಂಡಿರುವ ವಿಗ್ರಹವನ್ನೂ ಪ್ರತಿಷ್ಠಾಪನೆ ಮಾಡಿದ್ದಾರೆ.ಹೊಂಡದ ಇನ್ನೊಂದು ವಿಶೇಷ ಎಂದರೆ ಮಕ್ಕಳು ಅಥವಾ ಮದುವೆ ಇಲ್ಲದವರೂ ಅಲ್ಲಿ ಗಂಗಮ್ಮಮಾಡುತ್ತಾರೆ. ಒಳ್ಳೆಯದು ಆಗುತ್ತೆ ಎನ್ನುವ ನಂಬಿಕೆ ಇದೆ.ಅಲ್ಲೊಂದು ಗುಹೆ ಇದೆ. ಅದರೊಳಗೆ ಶಿವಲಿಂಗವಿಟ್ಟು ಪೂಜಿಸುತ್ತಾರೆ. ಯಾವುದೇ ಕಟ್ಟಡಗಳಿಲ್ಲದೆ, ಕರಿಯ ಬಂಡೆಗಳಿಂದ ದೇವಸ್ಥಾನವಾಗಿದೆ .ಉತ್ತರ ಮಳೆ ಶುರುವಾಗುವ ಸಂಧಭ೯ ದಲ್ಲಿ ಉತ್ತರ ಮಳೆ ಅಂಭು ಎಂದು ಜಾತ್ರೆ ನಡೆಯುತ್ತದೆ.ಆದರೆ ದಶರಥನ ಜಾತ್ರೆ ಯಲ್ಲ. ಕಂಚೀಪುರದಲ್ಲಿರುವ ಸುಗ್ರೀವನ ಜಾತ್ರೆ ಕಂಚೀದೇವರು ಎಂದೆ ಪ್ರಸಿದ್ಧಿ ಇದೆ ದೇವರಿಗೆ .ಕಂಚೀಪುರದಿಂದ ಬರುವ ಕಂಚೀದೇವರ ಜಾತ್ರೆಯನ್ನು ದಶರಥರಾಮೇಶ್ವರ ವಜ್ರದಲ್ಲಿ ನೆರವೇರಿಸುತ್ತಾರೆ.ಕಂಚೀದೇವರ ವಿಶೇಷ ವೆಂದರೆ ದೇವರಿಗೆ ಹರಕೆಯ ರೂಪದಲ್ಲಿ ದುಡ್ಡನ್ನು ತೂರುವುದು ಅಥವಾ ಸೂರೆಬಿಡುವುದು. ದೇವರಿಗೆ ಅದೇ ಪ್ರಿಯ ಭಕ್ತರು ಲಕ್ಷ ಗಟ್ಟಲೆ ದುಡ್ಧು ತೂರುತ್ತಾರೆ…. ಮೊದಲೆಲ್ಲ ಬಡವರ ಮಕ್ಕಳು ದುಡ್ಡನ್ನು ಹಾದು ಕೊಂಡು ಜೀವನ ನೆಡೆಸಲಿ ಎನ್ನುವ ಕಲ್ಪನೆ ಇರಬೇಕು …ಅಲ್ಲಿ ಇದೊಂದು ವಿಶೇಷವಿದೆ. ಬುತ್ತಿಬಾನ ಜಾತ್ರೆ ಶುರುವಾಗುವ ಮೂರು ದಿನಕ್ಕೆ ಮುಂಚೆಯೆ ಮೊಸರು ಅನ್ನ, ಈರುಳ್ಳಿ ಬೆಳ್ಳುಳ್ಳಿ ಪದಾರ್ಥಗಳನ್ನು ಬಿದಿರು ಕುಕ್ಕೆ ಬಾಳೆ ಎಲೆ ಹಾಕಿ ಇದನೆಲ್ಲ ಕಟ್ಟಿ ಉತ್ತರೆ ಗುಡ್ಧದಲ್ಲಿ ಇಟ್ಟಿರುತ್ತಾರೆ.ಜಾತ್ರೆಯ ದಿನ ದೇವರೊಟ್ಟಿಗೆ ತಲೆಯ ಮೇಲೆ ಹೊತ್ತು ತರುತ್ತಾರೆ. ಅದನ್ನು ಜನವೆಲ್ಲ ಮುಟ್ಟಿ ನಮಸ್ಕರಿಸುತ್ತಾರೆ ಅದನ್ನು ಮುಟ್ಟಿದರೆ ಕೆಲವು ಖಾಯಿಲೆಗಳು ಉಷಾರಾಗುತ್ತವೆ ಎಂಬ ನಂಬಿಕೆ ಇದೆ .ಜಾತ್ರೆ ಆದ ಮೇಲೆ ಬುತ್ತಿ ಬಾನ ಬಿಚ್ಚಿ ಅದರೊಳಗಿನ ಅನ್ನವನ್ನು ಪ್ರಸಾದ ವಾಗಿ ಕೊಡುತ್ತಾರೆ.ಅದನ್ನು ತಿನ್ನಲೆ ಬೇಕೆನ್ನುವ ಆಶಯ ಮತ್ತು ನಂಬಿಕೆ .ಮೊದಲು ಮಂಗಗಳಿಗೆ ಎಡೆ ಹಾಕುತ್ತಾರೆ. ಮೊದಲ ಪ್ರಾಶಸ್ತ್ಯ ಅಲ್ಲಿ ವಾನರ ಸೇನೆಗಳಿಗೆ ಎನ್ನುವುದು ವಿಶೇಷ.ಅಲ್ಲಿ ಪರೆವು ಅಂತ ಭಕ್ತರಿಗೆಲ್ಲ ಊಟದ ವ್ಯವಸ್ಥೆ ಮಾಡಿರುತ್ತಾರೆ. ಮುದ್ದೆ ಅನ್ನ ಸಾಂಬಾರು ಬೆಳೆದ ಎಲ್ಲಾ ಬೇಳೆಗಳ ತರಕಾರಿಗಳ ಸಾಂಬಾರು ಮಾಡಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡುತ್ತಾರೆ .ಇದು ಚಿತ್ರದುರ್ಗ ಜಿಲ್ಲೆ ಹೊಸದುಗ೯ ತಾಲ್ಲೂಕಿಗೆ ಸೇರಿದೆ. ಹುಳಿಯಾರು ಮಾಗ೯ದ ಮೂಲಕವು ಇಲ್ಲಿಗೆ ಹೋಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?