ತುಮಕೂರು ಲೈವ್

ಸಿದ್ಧಾರ್ಥ ಸಂಪದ ಬಿಡುಗಡೆ

Publicstory. In


Tumkuru; ಮಾಧ್ಯಮ ವಿದ್ಯಾರ್ಥಿಗಳು ಭಾಷೆ, ಸಾಹಿತ್ಯದ ಅರಿವು ಹಾಗೂ ವ್ಯಾಕರಣದ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಾಹಿತಿ ಡಾ.ಮಕ್ತುಂಬಿ ಕರೆ ನೀಡಿದರು.

ನಗರದ ಎಸ್‍ಎಸ್‍ಐಟಿ ಕ್ಯಾಂಪಸನಲ್ಲಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಮಾಧ್ಯಮ ವಿದ್ಯಾರ್ಥಿಗಳು ಪ್ರಕಟಿಸುತ್ತಿರುವ 43ನೇ ಸಿದ್ಧಾರ್ಥ ಸಂಪದ ವಾರಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ವ್ಯಾಕರಣಾಂಶವು ಸಂಪೂರ್ಣ ಅರ್ಥವನ್ನೇ ಬದಲಿಸಬಲ್ಲದು, ಆದ್ದರಿಂದ ವಾಕ್ಯರಣ ಮತ್ತು ಭಾಷೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ ವರದಿ ತಯಾರಿಸಿ ಎಂದು ಸಲಹೆ ನೀಡಿದರು.

ಇತ್ತೀಚಿನ ದಿನದಲ್ಲಿ ಟೆಲಿವಿಷನ್ ಮಾಧ್ಯಮಗಳಲ್ಲಿ ಆಗುತ್ತಿರುವ ಭಾಷೆಯ ಕಗ್ಗೋಲೆಯನ್ನುವರ್ಣಿಸಲು ಸಾಧ್ಯವಿಲ್ಲ. ಆದರೆ ಮುದ್ರಣ ಮಾಧ್ಯಮ ಆ ಹಂತತಲುಪದಿರುವುದಕ್ಕೆ ಖುಷಿ ಪಡಬಹುದು ಸಾಹಿತ್ಯದ ಆಸಕ್ತಿ, ಬರವಣಿಗೆಯ ವೈವಿದ್ಯತೆಯನ್ನು ವಿದ್ಯಾರ್ಥಿಗಳು ರೂಪಿಸಿಕೊಂಡಾಗ ಪತ್ರಿಕೋದ್ಯಮ ವೃತ್ತಿಬದುಕಿಗೆ ನೆರವಾಗುತ್ತದೆ ಎಂದರು.

ಆಡಳಿತಾಧಿಕಾರಿ ಡಾ.ವೈ.ಎಂ ರೆಡ್ಡಿ ಮಾತನಾಡಿ, ಪತ್ರಿಕೆಯು ಅತ್ಯುತ್ತಮ ಪುಟವಿನ್ಯಾಸದೊಂದಿಗೆ ಉತ್ತಮ ಗುಣಮಟ್ಟದಿಂದ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡುವುದಕ್ಕಿಂತ ಇಷ್ಟಪಟ್ಟು ಕೆಲಸ ಮಾಡುವುದರಿಂದ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.

ನಿರ್ದೇಶಕ ಡಾ.ಬಿ.ಟಿ ಮುದ್ದೇಶ್ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಯನ್ನು ಸಿದ್ಧಗೊಳಿಸುವ ಮುಂಚೆ ಹೆಚ್ಚು ಪತ್ರಿಕೆಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಇದರಿಂದ ಗುಣಮಟ್ಟದ ಬರವಣಿಗೆ ಮೂಡಲು ಸಾಧ್ಯ.ಭವಿಷ್ಯದ ಪತ್ರಕರ್ತರಾಗುತ್ತಿರುವವರು ಸುತ್ತಮುತ್ತಲಿನ ವಾತಾವರಣವನ್ನು ಸೂಕ್ಷ್ಮಗಳನ್ನು ಗಮನಿಸಬೇಕು ಎಂದರು.

Comment here