Publicstory
ತುಮಕೂರು: ಪಬ್ಲಿಕ್ ಸ್ಟೋರಿ.ಇನ್ ಡಿಜಿಟಲ್ ಮೀಡಿಯಾದಲ್ಲಿ ಪ್ರಕಟಗೊಂಡಿದ್ದ ದೇವರ ಹೊಸಹಳ್ಳಿ ಧನಂಜಯ ಅವರ ಹೊರಗೆ ನಿಂತ ಸಂತ ಕವನಕ್ಕೆ ರಾಜ್ಯ ಮಟ್ಟದ ಮೊದಲ ಪ್ರಶಸ್ತಿ ಸಂದಿದೆ.
ಶಿಕ್ಷಕರಾಗಿರುವ ಧನಂಜಯ ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದವರು.
ಕವನ ಓದಿ:ಹೊರಗೆ ನಿಂತ ಸಂತ
ಅವರು ಹಲವು ಕವನಗಳನ್ನು ಬರೆದಿದ್ದಾರೆ. ಪತ್ರಕರ್ತರೂ ಆಗಿರುವ ಅವರು ಸಮಾಜಮುಖಿ ಚಿಂತಕ. ಅವರ ಹೊರಗೆ ನಿಂತ ಸಂತ ಕವನವನ್ನು ಈಚೆಗೆ Publicstory ಯಲ್ಲಿ ಪ್ರಕಟಿಸಲಾಗಿತ್ತು.
ಈ ಕವನವನ್ನು ಬೇರು ಬಳಗ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದ ಆಶು ಕವನ ಸ್ಪರ್ಧೆಯಲ್ಲಿ ವಾಚಿಸಿದ್ದರು.
ಇಡೀ ಕವನವು ಚಪ್ಪಲಿಯ ತ್ಯಾಗವನ್ನು ಹೇಳುತ್ತದೆ.
ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ.
ಪ್ರಶಸ್ತಿ ಪಡೆದ ಧನಂಜಯ ಅವರನ್ನು Publicstory.in ಅಭಿನಂದಿಸಿದೆ.