Thursday, November 21, 2024
Google search engine
Homeಜೀವನ ಚರಿತ್ರೆಸೇವೆಯೆಂಬ ಮಂತ್ರಕ್ಕೆ ಸಂದ ಗೌರವಗಳು

ಸೇವೆಯೆಂಬ ಮಂತ್ರಕ್ಕೆ ಸಂದ ಗೌರವಗಳು

ಕಳೆದು ಸಂಚಿಕೆಯಿಂದ……..

ಎರಡನೇ ವಿಶ್ವಸಮರದ ಯುದ್ಧದಲ್ಲಿ ಗಾಯಗೊಂಡವರೂ, ನಿರಾಶ್ರಿತರೂ ಯೋಧರ ಆದ ಕ್ಷೇಮಾಭಿವೃದ್ಧಿಗಾಗಿ ಸ್ವಾತಂತ್ರ್ಯಪೂರ್ವ ದಿನಗಳಲ್ಲೇ ಸ್ಥಾಪನೆಗೊಂಡ ರೆಡ್‌ ಕ್ರಾಸ್ ಹೋಮ್ ಅಲಸೂರು ಕೆರೆ ಮುಂಭಾಗದ ವಿಶಾಲವಾದ ಮತ್ತು ಪ್ರಶಾಂತವಾದ ತಾಣದಲ್ಲಿದೆ. 1971ರ ಇಂಡೋ-ಪಾಕ್‌ ಯುದ್ಧ ಹಾಗೂ 1999ರ ಕಾರ್ಗಿಲ್ ಸಂಘರ್ಷಗಳಲ್ಲಿ ಸಂತ್ರಸ್ಥರಾದವರಿಗೂ ಇಲ್ಲಿ ಆಶ್ರಯ ನೀಡಲಾಗಿದೆ. ಇದರ ನಿರ್ವಹಣೆಗೆ ಗಣ್ಯರನ್ನು ಒಳಗೊಂಡ ಸಮಿತಿ ಇದ್ದು, ಡಾ.ಕೃಷ್ಣ ಅವರು ಇದರ ಆಡಳಿತ ಮಂಡಳಿಯಲ್ಲಿದ್ದಾರೆ.

ರೆಡ್‌ಕ್ರಾಸ್‌ನ ಉಚಿತ ರಕ್ತನಿಧಿ ಕೇಂದ್ರದ ಸುಧಾರಣೆ, ಉಚಿತ ಆಪ್ಟಿಕಲ್‌ ಸೆಂಟರ್‌ನ ಅಧುನೀಕರಣ, ಅರ್ಬನ್ ಮೆಟರ್ನಿಟಿ ಚೈಲ್ಡ್ ಅಂಡ್ ಫ್ಯಾಮಿಲಿ ವೆಲ್‌ಫೇ‌ರ್ ಸೆಂಟರ್‌, ಹೆಚ್‌ಐವಿ ಅಥವಾ ಏಡ್ಸ್ ಆರೈಕೆ-ನೆರವು ಹಾಗೂ ನಿರ್ವಹಣಾ ಕಾರ್ಯಗಳನ್ನು ಮತ್ತಷ್ಟು ಸಕ್ರಿಯಗೊಳಿಸಿದುದಲ್ಲದೆ; ಪ್ರಥಮ ಚಿಕಿತ್ಸೆ, ಹೋಮ್ ನರ್ಸಿಂಗ್ ತರಬೇತಿ, ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆ,

ಅವುಗಳ ನಿರ್ವಹಣಾ ಕ್ರಮ -ಹೀಗೆ ಇವರು ಸಕ್ರಿಯವಾಗಿ ಪಾಲ್ಗೊಂಡಿರುವ ಯೋಜನೆಗಳು ಒಂದೆರಡಲ್ಲ ಹತ್ತು ಹಲವಾರು. ಇವಿಷ್ಟಲ್ಲದೆ ಆರ್ಟಿಫಿಶಿಯಲ್ ಲಿಂಬ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯ ನೆರವಿನಿಂದ, ಸರ್ಕಾರೇತರ ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ನೆರವಿನೊಂದಿಗೆ ಕರ್ನಾಟಕದ 14 ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ವಿವಿಧ ರೀತಿಯಲ್ಲಿ ತೊಂದರೆಗೊಳಗಾದ ವಿಕಲಚೇತನರಿಗೆ ಗಾಲಿ ಕುರ್ಚಿಗಳು, ಉಚಿತ ಕನ್ನಡಕಗಳು ಮೊದಲಾದ ಅವಶ್ಯಕ ವಸ್ತುಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಗೌಡ ಎಂಬ ವಿಕಲಚೇತನನನ್ನು ಅನ್ಯಾಯವಾಗಿ ಗ್ರಂಥಾಲಯದ ಕೆಲಸದಿಂದ ಕಿತ್ತು ಹಾಕಿದನ್ನು ಕಂಡು ನೊಂದುಕೊಂಡರು. ಆ ವ್ಯಕ್ತಿ ಸಹಾಯ ಯಾಚಿಸಿ ಬಂದಾಗ ಸರ್ಕಾರದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಆ ವ್ಯಕ್ತಿಗೆ ಮರಳಿ ಉದ್ಯೋಗ ದೊರೆಯುವಂತೆ ನೋಡಿಕೊಂಡಿದ್ದು ಕೃಷ್ಣ ಅವರ ಅನನ್ಯ ಸೇವಾಮನೋಭಾವಕ್ಕೆ ಸಾಕ್ಷಿಯಾಗಿದೆ. ಹೀಗೆ ಇವರು ಅಶಕ್ತರ ಏಳಿಗೆಗಾಗಿ ವಹಿಸಿದ ಶ್ರಮವನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು 2008ರಲ್ಲಿ ‘ವಿಕಲಚೇತನರ ಸಬಲೀಕರಣ ರಾಜ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ಸುನಾಮಿ ದುರಂತದ ಸಂತ್ರಸ್ಥರ ನೆರವಿಗಾಗಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಆಗ ಕರ್ನಾಟಕ ರೆಡ್‌ಕ್ರಾಸ್‌ ಸಂಸ್ಥೆಯು ಈ ದುರಂತದ ಸಂತ್ರಸ್ಥರಿಗೆ ಪರಿಹಾರ ಮತ್ತು ಪುನರ್ವಸತಿ ಒದಗಿಸುವ ಕೋಟ್ಯಂತರ ರೂಗಳ ಯೋಜನೆಯನ್ನು ತಮಿಳುನಾಡಿನ ಕಡಲೂರು ಮತ್ತು ನಾಗಪಟ್ಟಣಮ್ ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲಿ

ಕೈಗೊಂಡಿತು. ಈ ಅತ್ಯಂತ ಯಶಸ್ವಿ ಪರಿಹಾರ ಕಾರ್ಯಕ್ರಮ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ, ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ರೆಡ್‌ ಕ್ರಾಸ್ ಅಂಡ್‌ ರೆಡ್ ಕ್ರೆಸೆಂಟ್ ಸೊಸೈಟಿಗಳಿಗೆ 2006ರಲ್ಲಿ ಸ್ಥಾಪಿಸಿದ ‘ಹೆನ್ರಿ ಡುನ್ಯಾಂಡ್ ಚಿನ್ನದ ಪದಕ’ವನ್ನು ದೊರಕಿಸಿಕೊಟ್ಟಿತು. ಸುನಾಮಿ ಅಪ್ಪಳಿಸಿದಾಗ ತಮಿಳುನಾಡಿನಲ್ಲಿ ವಸತಿಗೃಹಗಳನ್ನು ಕಟ್ಟಿಸಿಕೊಡುವುದರ ಜೊತೆಗೆ, ಅಲ್ಲಿನ ಜನರಿಗೆ ಜೀವನಾಧಾರವನ್ನು ಕಲ್ಪಿಸಿದರು. ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯಲ್ಲಿ ಮಾಡಿದ ಸೇವೆಗೆ ಕರ್ನಾಟಕ ರಾಜ್ಯಪಾಲರಿಂದ 2005ರಲ್ಲಿ ಇವರಿಗೆ ದೊರೆತ ರೆಡ್‌ ಕ್ರಾಸ್ ಸೇವಾ ಪ್ರಶಸ್ತಿ’ ಮತ್ತೊಂದು ಗರಿಯಾಗಿ ಕಂಗೊಳಿಸುತ್ತಿದೆ. ಈ ಪರಿಹಾರ ಕಾರ್ಯದಲ್ಲಿ ಮಹತ್ತರ ಪಾತ್ರವಹಿಸಿದ ಡಾ. ಕೃಷ್ಣ ಉತ್ತರ ಕರ್ನಾಟಕದಾದ್ಯಂತ ಆಯ್ಕೆ ಮಾಡಿಕೊಂಡ ಹಾಗೂ ತರಬೇತಿ ಪಡೆದ ಸ್ವಯಂ ಸೇವಕರನ್ನುಳ್ಳ ರೆಡ್‌ ಕ್ರಾಸ್ ಡಿಸಾಸ್ಟರ್ ರೆಸ್‌ಪಾನ್ಸ್ ತಂಡಗಳನ್ನು ರೂಪಿಸಿದ್ದರು. 2008ರಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗಾಗಿ ರೆಡ್‌ ಕ್ರಾಸ್‌ ಸಂಸ್ಥೆ ಕೈಗೊಂಡ ಕೋಟ್ಯಂತರ ರೂಗಳ ನೆರವಿನ ಯೋಜನೆಯ ತಂಡದ ಮುಖ್ಯಸ್ಥರಾಗಿದ್ದರು. ಇವರ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿನ ಪರಿಣತಿ ಮತ್ತು ಸೇವಾ ಮನೋಭಾವವನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ನೇತೃತ್ವದ ‘ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ಕ್ಕೆ ರಾಜ್ಯ ದರ್ಜೆಯ ಸದಸ್ಯರನ್ನಾಗಿ ನೇಮಕಮಾಡಿತು.

ಮುಂದುವರೆಯುವುದು….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?