ವಿದೇಶಿಯರನ್ನು ಕಂಡರೆ ಸಾಕು ಸೆಲ್ಫೀ ತೆಗೆದುಕೊಂಡು ಅವರಿಂದ ವಸ್ತುಗಳನ್ನು ಖರೀದಿಸುವಂತೆ ಹಿಂದೆ ಬೀಳುತ್ತಿದ್ದವರು ಶನಿವಾರ ದೂರ ಓಡಿದರು.
ತುಮಕೂರು ಜಿಲ್ಲೆ ಪಾವಗಡದ ಶನೈಶ್ಚರ ದೇಗುಲಕ್ಕೆ 4 ಮಂದಿ ವಿದೇಶಿಯರು ಆಗಮಿಸಿದ್ದನ್ನು ಕಂಡು ಪಟ್ಟಣದ ಜನತೆ ಆತಂಕದಿಂದ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.
ವಿದೇಶಿಯರು ದೇಗುಲಕ್ಕೆ ಬಂದಿರುವ ವಿಚಾರ ತಿಳಿದ ಕೂಡಲೆ ವಿವಿಧ ಇಲಾಖೆಗಳ ಸಿಬ್ಬಂದಿ ಶ ನೈಶ್ಚರ ದೇಗುಲದ ಬಳಿ ದೌಡಾಯಿಸಿದರು. ಆಂಧ್ರದ ಪುಟ್ಟಪರ್ತಿಗೆ ಕೆಲ ತಿಂಗಳ ಹಿಂದೆ ಬಂದಿದ್ದು, ಶನಿವಾರವಾದ್ದರಿಂದ ದೇಗುಲಕ್ಕೆ ಆಗಮಿಸಿರುವುದಾಗಿ ಅಧಿಕಾರಿಗಳಿಗೆ ವಿದೇಶಿಯರು ಮಾಹಿತಿ ನೀಡಿದರು.
4 ಮಂದಿಯ ಆರೋಗ್ಯ ತಪಾಸಣೆ ನಡೆಸಿ ಕೂಡಲೇ ತಮ್ಮ ಸ್ಥಳಗಳಿಗೆ ಹಿಂದಿರುಗುವಂತೆ ವೈದ್ಯರು ಸೂಚಿಸಿದರು. ಶನೈಶ್ಚರ ದೇಗುಲ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ದೇಗುಲದ ಬಾಗಿಲನ್ನು ಮುಚ್ಚಿಸಲಾಯಿತು.
ಕೆಲವರು ಅವರ ಸಮೀಪ ಹೋಗದೆ ದೂರದಿಂದಲೇ ಮಾಹಿತಿ ಪಡೆದರು. ದೂರದಿಂದಲೇ ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.