ಪಾವಗಡ: ತಿಮ್ಮರಾಯಪ್ಪ ರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ. ತಾಲೂಕಿನ ಜನತೆ ಋಣ ತೀರಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜನತೆಯಲ್ಲಿ ಮನವಿ ಮಾಡಿದರು.
ಪಾವಗಡ ನಗರದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ ಎಂ ತಿಮ್ಮರಾಯಪ್ಪ ಪರ ಮತ ಯಾಚನೆ ಮಾಡಿ ಮಾತನಾಡಿದ ಅವರು
ತಾಲ್ಲೂಕಿನ ಜನತೆಯ ಆಶೀರ್ವಾದ ನನ್ನ ಮೇಲೆ ಸದಾ ಇದೆ. ತಿಮ್ಮರಾಯಪ್ಪ ಅವರನ್ನು ಗೆಲ್ಲಿಸಿ ಕಳುಹಿಸಿ ಮಂತ್ರಿಯನ್ನಾಗಿ ಮಾಡುತ್ತೇನೆ ತಾಲ್ಲೂಕಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇನೆ
ಎಂದು ಆಶ್ವಾಸನೆ ನೀಡಿದರು.
ಪ್ರತಿ ಸಾರಿ ಬಂದಾಗಲೂ ಮನೆ ಮಗ ಎಂಬ ಪ್ರೀತಿಯಿಂದ ನನ್ನನ್ನು ಕಂಡಿದ್ದೀರಾ ಪ್ರೀತಿಯಿಂದ ಕಂಡಿದ್ದೀರಾ ಬೆಂಬ ನೀಡಿ ಕೈಬಲಪಡಿಸಿದ್ದೀರಾ ಅದನ್ನು ನಾನು ಮರೆಯಲಾರೆ ಕುಡಿಯುನೀರಿನ ಸಮಸ್ಯೆಗಳನ್ನು ಅಲ್ಲದೆ ಪಂಚರತ್ನಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ತಾಲ್ಲೂಕು ಅಭಿವೃದ್ದಿ ಗೊಳಿಸುತ್ತೆನೆ ಎಂದರು.
ರಾಜ್ಯದಲ್ಲಿ ಮುಂದಿನ ೫ವರ್ಷಕ್ಕೆ ಮುಖ್ಯ ಮಂತ್ರಿಯನ್ನಾಗಿ ಅಶೀರ್ವಾದ ಮಾಡುತ್ತಿರೆಂದು ನಂಬಿದ್ದೇನೆ ಎಂದರು.
ಕೃಷಿಕರ ಕುಟುಂಬಕ್ಕೆ ಆದಾಯವಾಗಲಿ ಎಂದು ಭೂರಹಿತ ಕುಟುಂಬಕ್ಕೆ ತಿಂಗಳಿಗೆ 2000 ರೂ ನೀಡತಕ್ಕದ್ದು.ಹಾಗೆ ರೈತರಿಗೆ ಒಂದು ಎಕರೆ ಭೂಮಿಗೆ 10 ಸಾವಿರ ರೂ ವರ್ಷಕ್ಕೆ ಬೆಳೆ ವಿಮೆ ಎಕರೆ ವರೆಗೂ ನೀಡಲಾಗುವುದು. ವೃದ್ಧಾಪ್ಯ ಹಾಗೂ ವಿಧವೆ ವೇತನ 5000 ರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೀಡುತ್ತೇವೆ ಎಂದು ಆಶ್ವಾಸನೆ ಕೊಟ್ಟರು.
ಮಾಜಿ ಶಾಸಕ ಕೆ ಎಂ ತಿಮ್ಮಿರಾಯಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಲರಾಮರೆಡ್ಡಿ, ಗೋವಿಂದ ಬಾಬು,ತಿಮ್ಮಾರೆಡ್ಡಿ,ಆರ್ ಸಿ ಅಂಜಿನಪ್ಪ, ಚಂದ್ರಶೇಖರ, ಚೆನ್ನಮಲ್ಲಯ್ಯ, ಕೊತ್ತೂರು ನಾಗೇಶ,ಸಾಯಿ ಸುಮನ, ದೀಪು, ಎನ್ ಎ ಈರಣ್ಣ,ಶಿವಪ್ಪ ನಾಯ್ಕ್. ರಾಮಕೃಷ್ಣ ರೆಡ್ಡಿ,ಅಂಬಿಕಾ, ಸೇರಿದಂತೆ ಮತ್ತಿತರರು ಹಾಜರಿದ್ದರು.