ತುಮಕೂರು : ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸುವ ಮೂಲಕ ಆಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು ಎಂಬ ಬಂಗಾರಕ್ಕೆ ಟಾಟಾ ಮಾಡಿ ಕಳಿಸಿದ್ದಾರೆ.
ಇಂದು ತುಮಕೂರು ನಗರಕ್ಕೆ “ಪಂಚರತ್ನ” ಯಾತ್ರೆಯು ಆಗಮಿಸಿದ್ದು, ಸಿದ್ಧಗಂಗಾ ಮಠದಲ್ಲಿ ಡಾ||ಶ್ರೀ ಶಿವಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದ ನಂತರ ಮಾತನಾಡಿದ ಕುಮಾರಸ್ವಾಂಇಯವರು, ತುಮಕೂರು ನಗರಕ್ಕೆ ಎನ್.ಗೋವಿಂದರಾಜುರವರೇ ಮುಂದಿನ 2023ರ ವಿಧಾನ ಸಭೆಯ ತುಮಕೂರು ನಗರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ತುಮಕೂರು ನಗರದ ಮತದಾರರಿಗಿದ್ದ ಗೊಂದಲವನ್ನು ನಿವಾರಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಆಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು ತುಮಕೂರು ನಗರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಬೇಕೆಂದು ತುಮಕೂರಿನಲ್ಲಿ ಹಲವು ಕಾರ್ಯಕ್ರಮಗಳಿಗೆ ಸಹಾಯಾರ್ಥ ಹಸ್ತ ನೀಡಿದ್ದರು.
ಇಂದು ಪಂಚರತ್ನಯಾತ್ರೆ ಆಗಮಿಸುವ ತುಮಕೂರು ನಗರದ ಬೀದಿಗಳಲ್ಲಿ ಕುಮಾರಸ್ವಾಮಿಯನ್ನು ಸ್ವಾಗತಿಸುವ ಬೊಮ್ಮನಹಳ್ಳಿ ಬಾಭುರವರ ದೊಡ್ಡ ದೊಡ್ಡ ಕಟೌಟ್‍ಗಳು ಎದ್ದು ಕಾಣುತ್ತಿದ್ದವು.
ತುಮಕೂರು ಜನರು ಕುಮಾರಸ್ವಾಮಿಯವರು ಆಟಿಕಾಬಾಬು ಕರೆ ತಂದು ಏನು ಮಾಡಲು ಹೊರಟಿದ್ದಾರೆ ಎಂಬ ಗೊಂದಲ ಮತದಾರರಲ್ಲಿತ್ತು.
ಇತ್ತೀಚೆಗೆ ತುಮಕೂರು ನಗರಕ್ಕೆ ಆಗಮಿಸಿದ್ದು ಮೊಮ್ಮನಹಳ್ಳಿ ಬಾಬು ತಾನು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗುತ್ತಿದ್ದೇನೆ, ನನಗೆ ತುಮಕೂರು ಗ್ರಾಮಾಂತರ ಶಾರದಾದ ಗಾಂಶಂಕರ್ ಹಾಗೂ ಕುಮಾರಣ್ಣನ ಅಪಾರವಾದ ಬೆಂಬಲ ದೊರಕಿದೆ ಅದುದರಿಂದ ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ಹೇಳಿಕೆಯನ್ನು ನೀಡಿದ್ದರು.
ಈ ಸಂದರ್ಭದಲ್ಲಿ ಜನರಲ್ಲಿ ಯಾವುದೇ ರೀತಿಯಾದ ಗೊಂದಲ ಬೇಡ ತುಮಕೂರು ನಗರಕ್ಕೆ ಗೋವಿಂದರಾಜು ಅವರೇ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಿಸಿದಾಗ ಗೋವಿಂದರಾಜುರವರ ಆನಂದಕ್ಕೆ ಪಾರವೇ ಇರಲಿಲ್ಲ. ಕುಮಾರಸ್ವಾಮಿಯವರು ಗೋವಿಂದರಾಜು ಅವರಿಗೆ ಎಲ್ಲರೂ ಅವರಿಗೆ ಸಹಕರಿಸುವಂತೆ ಕೋರಿದರು