Publicstory/prajayoga
ತುಮಕೂರು : ಪೊಲೀಸರೆಂದರೆ ಮೈಗಳ್ಳರು, ಲಂಚ ಪಡೆಯುತ್ತಾರೆ, ಸಂಭಾವನೆಗೆ ತಕ್ಕನಾಗಿ ಜವಬ್ದಾರಿ ನಿರ್ವಹಿಸುವುದಿಲ್ಲ ಎಂಬೆಲ್ಲ ತಪ್ಪು ಕಲ್ಪನೆಗಳು ಸಮಾಜದಲ್ಲಿದೆ. ಆದರೆ, ಇಂಥಾ ಆರೋಪಗಳ ನಡುವೆಯೂ ಕರ್ತವ್ಯ ನಿಷ್ಠೆ ಮೆರೆಯುವ ಪೊಲೀಸರಿದ್ದಾರೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಅದಕ್ಕೆ ಪುರಾವೆ ಎಂಬಂತೆ..
ಇಂದು ನಗರದ ಚರ್ಚ್ ಸರ್ಕಲ್ ಬಳಿ ಗಣೇಶ ಚತುರ್ಥಿ ಪ್ರಯುಕ್ತ ಟ್ರಾಫಿಕ್ ದಟ್ಟಣೆ ಅಧಿಕವಾಗಿತ್ತು. ಈ ವೇಳೆ ‘ಮೇರಿ ಟಿ ಎಸ್’ ಎನ್ನುವ ಮಹಿಳಾ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ದಿನಪೂರ್ತಿ ಕರ್ತವ್ಯದಲ್ಲಿ ನಿರತರಾಗಿದ್ದು ಕಂಡು ಬಂತು. ಅವರು, ಧೂಳು ಮತ್ತು ಹೊಗೆಯ ನಡುವೆಯೂ ಬೆಳಿಗ್ಗೆಯಿಂದ ಸಂಜೆಯವರೆಗೆ ಅಡ್ಡಾದಿಡ್ಡಿ ಚಲಿಸುತ್ತಿದ್ದ ವಾಹನಗಳಿಗೆ ನಿಯಂತ್ರಣ ಹಾಕಿ ಕರ್ತವ್ಯ ನಿಷ್ಠೆ ಮೆರೆದರು.