ತುರುವೇಕೆರೆ: ತಾಲ್ಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರಾರಂಭೋತ್ಸವದ ಪೂರ್ವ ಸಿದ್ಧತಾ ಕಾರ್ಯ ಸೋಮವಾರ ಭರದಿಂದ ಸಾಗಿತು.
ಪ್ರತಿಯೊಂದು ಶಾಲೆಗಳಲ್ಲೂ ಶಿಕ್ಷಕರು, ಸಿಬ್ಬಂದಿಗಳು ಹಾಗು ಮಕ್ಕಳು ಶಾಲಾ ಆವರಣ, ಕೈ ತೋಟದ ಸ್ವಚ್ಛತಾ ಕಾರ್ಯ ಮಾಡಿದರು. ಬಿಸಿಯೂಟ ತಯಾರಿಸುವ ಕೊಠಡಿ, ಅಡುಗೆ ಪಾತ್ರೆಗಳು, ಆಹಾರ ಪದಾರ್ಥಗಳು, ಕುಡಿಯುವ ನೀರಿನ ಟ್ಯಾಂಕ್ಗಳನ್ನು ಹಾಗು ಶೌಚಾಲಯವನ್ನು ಶುಚಿಗೊಳಿಸಿದರು.
ಇದಾದ ಮೇಲೆ ಎಲ್ಲ ತರಗತಿ ಕೊಠಡಿಗಳ ದೂಳನ್ನು ಒಡೆದು ನೆಲವನ್ನು ಸ್ವಚ್ಛಗೊಳಿಸಿ ಕಟ್ಟಡಗಳ ಶಿಥಿಲಾವ್ಯವಸ್ಥೆಯ ರಿಪೇರಿ ಮಾಡಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಗ್ರಾಮಗಳಲ್ಲಿ ಫ್ಲೆಕ್ಸ್ ಮತ್ತು ಕರ ಪತ್ರ ಹಂಚುವ ಮೂಲಕ ಶಿಕ್ಷಕರು ಮತ್ತು ಮಕ್ಕಳು ಮನೆಮನೆ ದಾಖಲಾತಿ ಆಂದೋಲನ ನಡೆಸಿದರು.
ಆಯಾ ಶಾಲೆಗಳಲ್ಲಿ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸೇರಿ ಸಭೆ ನಡೆಸಿ ಪ್ರಸಕ್ತ ಸಾಲಿನ ಶೈಕ್ಷಣಿಕ ಕಾರ್ಯಯೋಜನೆಗಳ ಬಗ್ಗೆ ಚಚರ್ಿಸಿದರು.
‘ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ಕೆಲ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಸಿದ್ಧತೆ, ದಾಖಲಾತಿ ಬಿಸಿಯೂಟದ ವ್ಯವಸ್ಥೆ, ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆಯ ಸಿದ್ಧತೆ ಪರಿಶೀಲನೆ ನಡೆಸಿ ಶಿಕ್ಷಕರೊಂದಿಗೆ ಸಭೆ ನಡೆಸಿ ಕಳೆದ ಸಾಲಿನ ಫಲಿತಾಂಶದ ಪರಾಮಶರ್ೆ ಮಾಡಿ ಮುಂದಿನ ವರ್ಷದ ಫಲಿತಾಂಶ ಉತ್ತಮ ಪಡಿಸಿಕೊಳ್ಳಬೇಕೆಂದು ಸೂಚಿಸಿದರು.’