ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ಯಂತ್ರಗಳಿದ್ದೂ ಡಯಾಲಿಸಿಸ್ ನಿಲ್ಲಿಸಲಾಗಿದ್ದು ರೋಗಿಗಳು ಡಯಾಲಿಸಿಸ್ ಮಾಡಿಸಲು ತುಮಕೂರಿಗೆ ಹೋಗುವಂತಾಗಿದೆ ಕೂಡಲೇ ಇದನ್ನು ಸರಿಪಡಿಸಿ ಇಲ್ಲಿಯೇ ಡಯಾಲಿಸಿಸ್ ಸೇವೆ ನೀಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವೈದ್ಯಾಧಿಕಾರಿಗೆ ತಾಕೀತು ಮಾಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು
‘ಹೆರಿಗೆ ಮಾಡಲು 10ರಿಂದ 15 ಸಾವಿರ ಹಣ ನೀಡಬೇಕು ಇಲ್ಲವಾದರೆ ತಮ್ಮ ಖಾಸಗಿ ಆಸ್ಪತ್ರೆಗೆ ಕರೆಯಿಸಿಕೊಂಡು ಬಡವರಿಂದ ಹಣ ಕೀಳುತ್ತಿದ್ದಾರೆ ಎಂದು ಸಾರ್ವಜನಿಕರ ದೂರು ಇದೆ ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿ ಸಭೆ ಮಾಡಿ ಸರಿಪಡಿಸಿ ನಂತರ ನಾನು ಸಭೆಯನ್ನು ಮಾಡುತ್ತೇನೆ ನಾನು ವೈದ್ಯರನ್ನು ಬೈಯುವುದಿಲ್ಲ ಸರಿಯಾದ ತಮ್ಮ ಕರ್ತವ್ಯ ಮಾಡಬೇಕು ಮುಂದೆ ಈ ರೀತಿಯ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾಗೆ ಸೂಚಿಸಿದರು.’
‘ತಾಲ್ಲೂಕಿನ ಮಾಯಸಂದ್ರದ ಟಿ.ಬಿ.ಕ್ರಾಸ್‍ನಿಂದ ಕ್ಷೇತ್ರದ ಗಡಿಯಾದ ಯಡಿಯೂರು ವರೆಗಿನ ಮಧ್ಯೆದಲ್ಲಿ ಬರುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲವಾಗುವಂತೆ ಡಾಂಬರ್ ಹಾಕಿ ಎಂದು ಲೋಕಪಯೋಗಿ ಎಇಇ ಪ್ರಭಾಕರ್ಗೆ ಖಡಕ್ ಸೂಚನೆ ಕೊಟ್ಟರು.’
‘ತಾಲ್ಲೂಕಿನ ಕೆರೆಗಳನ್ನು ಮೀನುಗಾರಿಕೆ ನೀಡಿರುವ ಗುತ್ತಿಗೆಯನ್ನು ಮತ್ತೆ ಮರು ಗುತ್ತಿಗೆ ಮಾಡಬೇಕು. ಲಕ್ಷಾಂತರ ರೂಪಾಯಿಗಳ ಆದಾಯ ಬರುವಂತಹ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಟೆಂಡರ್ ಅನ್ನು ಕಡಿಮೆಗೆ ಟೆಂಡರ್ ನೀಡಿದ್ದು ಕೂಡಲೇ ರದ್ದು ಪಡಿಸಬೇಕು ನೀನು ಎಲ್ಲ ಕೆರೆಗಳಿಗಳಿಗೂ ಪಾಟ್ನರ್ ಹಾಗಿದ್ದೀಯಾ ಎಂಬುದು ಗೊತ್ತಿದೆ ಕೂಡಲೇ ಸರಿಪಡಿಸಬೇಕು ಎಂದು ಮೀನುಗಾರಿಗೆ ಇಲಾಕೆಯ ಸಹಾಯಕ ನಿರ್ದೇಶಕ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.’
‘ತಾಲ್ಲೂಕಿನಲ್ಲಿ 34 ಸಾವಿರ ಕೃಷಿಕರಿದ್ದು ಸಾವಿರಾರು ಎಫ್.ಐ.ಡಿ ಫೇಕ್ ಐಡಿ ಮಾಡಿಕೊಂಡು ಅಕ್ರಮವಾಗಿ ನ್ಯಾಪೆಡ್ಗೆ ರಾಗಿ ಬಿಟ್ಟು ಅಕ್ರಮ ಹಣ ಮಾಡಿದ್ದಾರೆ ಕೇವಲ 2 ಸಾವಿರ ರೂಪಾಯಿಗಳಿಗೆ ಪೇಕ್ ಐಡಿ ಮಾಡಿಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ತಾಲ್ಲೂಕಿನಲ್ಲಿ ಎಷ್ಟು ಎಫ್.ಐ.ಡಿ ಇವೆ, ಎಷ್ಟು ಕ್ವಿಂಟಾಲ್ ಬೆಳೆ ಬೆಳೆದಿದ್ದಾರೆ ಎಂಬುದನ್ನು ಎಪಿಎಂಸಿಗೆ ತಿಳಿಸಬೇಕು. ನಮ್ಮ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿ ಬೇರೆ ಕಡೆಯಿಂದ ರಾಗಿ ತಂದು ಹಾಕಿ ಹಣ ಮಾಡುತ್ತಿದ್ದಾರೆ ಇನ್ನು ಮುಂದೆ ಈ ರೀತಿ ಹಾಗಬಾರದು ಎಂದು ಕೃಷಿ ಸಹಾಯಕ ನಿರ್ದೇಶಕಿ ಪೂಜಾ.ಬಿ ಗೆ ಸೂಚನೆ ನೀಡಿದರು.’
ಸಭೆಯಲ್ಲಿ ತಹಶೀಲ್ದಾರ್ ವೈ.ಎಂ. ರೇಣುಕುಮಾರ್, ತಾಲ್ಲೂಕು ಪಂಚಾಯಿತಿ ಇ.ಓ.ಸತೀಶ್ ಕುಮಾರ್, ಬೆಸ್ಕಾಂ ಎಇಇ ಚಂದ್ರಾನಾಯಕ್, ಜಿಲ್ಲಾ ಪಂಚಾಯಿತಿ ಎಇಇ ವಾಸುದೇವ್, ಬಿಇಓ ಎಸ್.ಕೆ.ಪದ್ಮನಾಭ, ತೋಟಗಾರಿಕೆ ಇಲಾಕೆ ಸಹಾಯಕ ನಿರ್ದೇಶಕ ಅಂಜನರೆಡ್ಡಿ, ಪಶು ಇಲಾಕೆ ಸಹಾಯಕ ನಿರ್ದೇಶಕ ಸದಾಶಿವಯ್ಯ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.