ನಮಗರಿವಿಲ್ಲದೆ ಹುಟ್ಟಿದ ಒಂದೇ ಕಾರಣಕ್ಕೆ ಕೆಲವು ಸಲ ನಮಗೆ ನಾವೇ ನಮ್ಮ ಭುಜ ಹಾಗೂ ಬೆನ್ನನ್ನು ತಟ್ಟಿಕೊಳ್ಳಬೇಕು!
ಯಾಕಂದ್ರೆ?
ಈ ಜಗದಲ್ಲಿ ಬೆನ್ನು ತಟ್ಟುವವರಿಗಿಂತ ತಲೆಮೇಲೆ ಕುಟ್ಟಿ ಹಳ್ಳಕ್ಕೆ ತಳ್ಳುವವರೇ ಜಾಸ್ತಿ.
ಕೆಲವು ಸಲ ನಮಗೆ ನಾವೇ ಸಂತೋಷದಿಂದ ನಗಬೇಕು!
ಯಾಕಂದ್ರೆ?
ನಗಿಸುವವರಿಗಿಂತ ನಗೆಪಾಟಲು ಮಾಡುವವರೇ ಹೆಚ್ಚು ಈ ಲೋಕದಲ್ಲಿ..
ಕೆಲವು ಸಲ ನಮಗೆ ನಾವೇ ಸುಧಾರಿಸಿಕೊಳ್ಳಬೇಕು! ಯಾಕಂದ್ರೆ? ಸುಧಾರಿಸುವವರಿಗಿಂತ ಯಾಮಾರಿಸುವವರೇ ಜಾಸ್ತಿ,
ಕೆಲವು ಸಲ ನಮ್ಮನ್ನ ನಾವೇ
ಸಮಾಧಾನಿಸಿಕೊಳ್ಳಬೇಕು!
ಇಲ್ಲದಿದ್ದರೆ ಎಲ್ಲರ ಮುಂದೆ ಅವಮಾನಿಸಿಕೊಳ್ಳಬೇಕು.
ಈ ಲೋಕದಲ್ಲಿ.!
ಕೊನೆಯವರೆಗೂ ನಮ್ಮನ್ನು ನಾವು ಮಾತ್ರವೇ ಇಷ್ಟಪಡಬೇಕು.
ಇಲ್ಲದಿದ್ದರೆ ಅವರಿವರಿಗೋಸ್ಕರ
ಸುಮ್ಸುಮ್ನೆ ಕಷ್ಟಪಡಬೇಕು.
ಕೆಲವು ಸಲ ನಮಗೆ ನಮ್ಮವರೇ ಖೆಡ್ಡಾ ತೋಡಿ ಕೆಡವುತ್ತಾರೆ,
ಹಾಗಾಗಿ ಎಡವುದ ತಡೆದು ದಿಟ್ಟವಾಗಿ ನಿಷ್ಠೆಯಿಂದ ನಿಂತು ನಡೆಯಬೇಕು.
ಕೆಲವರು ನಮ್ಮನ್ನು ಇಷ್ಟಪಡುವುದಿಲ್ಲ!
ಹಾಗೆಂದ ಮಾತ್ರಕ್ಕೆ ಅವರಿಗೋಸ್ಕರ ಕಷ್ಟಪಡದೆ ನಮ್ಮಿಷ್ಟಕ್ಕನುಗುಣವಾಗಿ
ನಮ್ಮ ಜೀವನದಲ್ಲಿ ಶ್ರೇಷ್ಟವಾಗಿ ಬದುಕಬೇಕು.
ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ!
“ಈ ಪ್ರಪಂಚ ಒಳ್ಳೆಯವರನ್ನ ಒಳ್ಳೆಯವರಂತ ಯಾವತ್ತಿಗೂ
ಒಪ್ಪಿಕೊಳ್ಳುವುದು ಇಲ್ಲ, ಒಳ್ಳೆಯವರಂತೆ ನಟಿಸುವವರನ್ನ ಮಾತ್ರವೇ?ಇವರು ತುಂಬಾ ಒಳ್ಳೆಯವರು!ಅನ್ನುತ್ತೆ ಈ ಪ್ರಪಂಚ.
ಒಳ್ಳೆತನವನ್ನು ಗುರುತಿಸೋ ಒಳ್ಳೆಯತನ ತುಂಬಾ ಜನಗಳಲ್ಲಿ ಯಾವಾಗಲೂ ಇರೋದಿಲ್ಲ.ನಮ್ಮ ಜೀವನದಲ್ಲಿ ಎಲ್ಲರೊಂದಿಗೆ ಕಲಿತು,ಕಲೆತು,ಬೆರೆತು,
ನುರಿತು ಅರಿತು ಕನಿಷ್ಠ ಸಾವು ತಾನಾಗೇ ಬರುವವರೆಗೂ ನೆಮ್ಮದಿ ಹಾಗೂ ಶಾಂತಿಯುತವಾಗಿ ಒಟ್ಟಾಗಿ ಇರೋಣ,
ಒಟ್ಟಾಗಿ ಇರಲು ಇಷ್ಟ ಪಡದವರ ಜೊತೆ ಕಷ್ಟ ಪಟ್ಟಾದರೂ,ನಮಗೆ ನಷ್ಟವಾದರೂ ಚಿಂತೆಪಡದೆ ಎಲ್ಲರಂತೆ ಎಲ್ಲರೊಂದಿಗೆ ಎಲ್ಲಾ ಸಮಯ ಸಂದರ್ಭದಲ್ಲಿ ನಗುತ್ತಿರೋಣ,
ಇಷ್ಟೇ ಹೊರತು..,
ಎಲ್ಲರೂ ನಮ್ಮವರೇ!ಎಂದೂ ಯಾವತ್ತೂ ಅಂದುಕೊಳ್ಳಬಾರದು,
ಅವರು ನಮ್ಮಿಂದ ದೂರಾದರೂ ನೊಂದು
ಕೊಳ್ಳಬಾರದು.
ಎಲ್ಲಾ ನನ್ನವರೇ?ಅಂತಲೂ ಸಂಭ್ರಮಿಸಬಾರದು..
ಸದಾ ಮುಖವಾಡ ಧರಿಸಿ ನಟನೆಯಿಂದ ಕೂಡಿದ ಪ್ರತಿ ಮಾನವನ ಪ್ರೇಮ,ಪ್ರೀತಿ,
ಅನುಕಂಪ,ಅನುಭಂದ,
ಅಪ್ಯಾಯತೆ ವಿಷಕ್ಕಿಂತ
ಹೆಚ್ಚು ಪ್ರಮಾದ ಹಾಗೂ ಪ್ರಮಾಣವಿದ್ದು ನಷ್ಟವಂತೂ ಪರಿಣಾಮಕಾರಿಯಾಗಿಯೇ
ಇರುತ್ತದೆ.
ನೆನಪಿಟ್ಟುಕೊಳ್ಳಿ
ಹುಟ್ಟಿದ ತಪ್ಪಿಗೆ ಬದುಕಬೇಕು..,
ನಮಗಾಗಿ ಬದುಕಬೇಕು.
ಕೇವಲ ನಮಗಾಗಿ ಮಾತ್ರವೇ ಬದುಕಬೇಕು.
ಪುಲಿ.ಮಂಜುನಾಥಜೋಗಿ.
ರಾಜ್ಯಶಾಸ್ತ್ರ ಉಪನ್ಯಾಸಕರು.