Publicstory/Prajayoga
ತುಮಕೂರು: ವಿವಿ ಆವರಣದಲ್ಲಿ ವಿಶ್ವ ಜನಪದ ದಿನಾಚರಣೆ ಪ್ರಯುಕ್ತ ಡಾ.ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಜನಪದ ಕ್ರೀಡಾಕೂಟವನ್ನು (ಸೆ.6ರ) ನಾಳೆ ಬೆಳಿಗ್ಗೆ 9 ಗಂಟೆಗೆ ಎರ್ಪಡಿಸಲಾಗಿದೆ. ವೀರಗಾಸೆ ಪ್ರದರ್ಶನ ಹಾಗೂ ಸಿದ್ಧರಾಜು ತಂಡದಿಂದ ಜನಪದ ಗೀತೆ ಗಾಯನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇಸೀ ಕ್ರೀಡೆಗಳಾದ ಲಗೋರಿ, ಚಿನ್ನಿದಾಂಡು, ಕಣ್ಣಮುಚ್ಚಾಲೆ, ಆಣೆಕಲ್ಲು, ಬುಗುರಿ, ಚೌಕಾಬಾರ, ಅಳಗುಳಿ ಮನೆ, ಹಗ್ಗ ಜಗ್ಗಾಟ, ಮರಕೋತಿ, ಹಾವುಏಣಿ, ಕುಂಟೆಬಿಲ್ಲೆ ಸೇರಿದಂತೆ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಕ್ರಿಯಾಶೀಲ ಚಟುವಟಿಕೆಯಲ್ಲಿರುವ ತುಮಕೂರು ವಿವಿ ಡಾ.ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಜನಪದ ಕ್ರೀಡಾ ಕೂಟ ಆಯೋಜನೆ ಮಾಡುವ ಮೂಲಕ ಗಮನಸೆಳೆದಿದೆ.
ಆಧುನಿಕತೆಯ ಭರಾಟೆಯಿಂದ ಜನಪದ ಸಂಗೀತ, ಕಲೆ ಮತ್ತು ಆಟಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಕ್ರೀಡಾಕೂಟವನ್ನು ಆಯೋಜನೆಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಹಳ್ಳಿ ಆಟಗಳ ಸೊಬಗನ್ನು ಪರಿಚಯಿಸಲು ವಿವಿ ಮುಂದಾಗಿದೆ ಎಂದು ತುಮಕೂರು ವಿವಿಯ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕರು ಡಾ.ಪಿ.ಎಂ.ಗಂಗಾಧರಯ್ಯ ತಿಳಿಸಿದ್ದಾರೆ.