Thursday, March 28, 2024
Google search engine
Homeಸಾಹಿತ್ಯ ಸಂವಾದಉಜ್ಜಜ್ಜಿ ರಾಜಣ್ಣ ಅವರ ಕತೆ: ಹೊಲಾದಿ

ಉಜ್ಜಜ್ಜಿ ರಾಜಣ್ಣ ಅವರ ಕತೆ: ಹೊಲಾದಿ

ಬಯಲುಸೀಮೆ, ಮಲೆನಾಡಿನ ಎರಡಡೂ ಸೀಮೆಗಳ ಮಿಶ್ರಣದ ಯ್ಯಾಸ ಭಾಷೆಯಲ್ಲಿನ ಉಜ್ಜಜ್ಜಿ ರಾಜಣ್ಣ ಅವರ ಹೊಲಾದಿ ಕತೆ ಕುತೂಹಲಭರಿತವಾಗಿದೆ.

ಪರೂಡಿ ಜನ ದರೂಡಿ ಮ್ಯಾಲೆ ಬಂದು ಹೊಲ ಅಳಿತವುರೆ. ಅಳತೆ ಮಾಡಿ ಕತ್ರಸೋಕೇನು ಹೊಲ ತಾನೊಳುಗ್ಲು ಅಂಗಿ ಬಟ್ಟೋ ನಿಕ್ಕರ್ ಬಟ್ಟೆ ಕೆಟ್ಟೋತ ಹೊಲ ಅಗುದು ಹೊಳೆ ತೋಡೋಕೆ. ತುಂಡಾಕಿದ್ರೆ ಹೋತು ಹೊಲ ಕೊಂಡಿಪಟ್ಟೂ ಉಳಿಯಂಗಿಲ್ಲ.

ನಾವು ದಗಸತ್ತಾಗಿಲ್ಲಾಂದ್ರೆ ಎದಿ ಮೇಲೆ ಕಲ್ಲೆಳಿಯಾಕೂವೆ ಹೇಸ್ದು ಜನ. ಹೊಲೇನು ಇವ್ರಪ್ಪುಗಳು ಮಾಡಿ ಇಟ್ಟುದ್ದ. ಭೂಮಿ ಕಳ್ಕಂಡ ಬಡವ್ರು ಉಗ್ರು ಮನಿವಷ್ಟು ನೆಲ ಕೊಳ್ಳಲಾದ ಕಾಲ ಬಂದು ಕೂತೈತೆ‌. ಪುತ್ರಪೂವತ್ಕಾಲದಿಂದಲೂವೆ ಗೇಯ್ಕಂದು ಉಂಡೀವಿ. ಸರ್ಕಾರ ಕೊಡೊ ಕಿಲುಬು ಕಾಸು ದುಡದಿಕ್ಕಲ್ಲ. ಹೊಲಿದ್ರೆ ಬೆಳ್ಕಂದು ತಿನ್ನಬೌದು‌.

ಯಾವ ಬ್ರಹ್ಮನೇ ಎದ್ದು ಬಂದ್ರೂವೆ ಉಗ್ರು ಮನಿಯೊಷ್ಟೂ ನೆಲನೂ ಬಿಡಲ್ಲ. ಯಾವನೇನು ಕೇಸಾಕ್ತನೊ ಹಾಕ್ಲಿ. ಕೋರ್ಟ್ ಹಾಡತಕಾ ಸರ್ತಿ. ಬರಲಿ ಸರ್ವೇರು ನಾಳಿಕುವಾ. ತಸಿಲ್ದಾರುನ್ನ ಕರಕಂಡು ಬರರ್ತೀವಿ ಹೊಲ ಬಿಡಿಸ್ಕತೀವಿ ಎಂದೋಗೆವುರೆ. ಹೊಲೇನು ತಹಸಿಲ್ದಾರುಂದಲ್ಲ, ಕಂದಾಯ ಕಟ್ಟೋನು ನಾನು. ಬಿಟ್ಟಕೊಡೋಕೇನು ಜಮೀನು ಪಡಾ ಬಿದ್ದಿಲ್ಲ. ಎಂದು ದಾರುದ್ದಕೂ ಸಾಪ್ಳುಸ್ತಾವಾ ಸಿದ್ದನಂಜಯ್ಯನೂವೆ ಬಾರೆ ಅಡ್ಡಾಯ್ದು ಕರಿಕಲ್ಲು ಬಟುವಾಳ್ದ ಒಳಗಾದು ಮರೆಯಾದ. ಅವ್ನು ಬೈಗುಳ ಅವ್ನುಗುಂಟಲೇ ಕೇಳ್ತಾಲೇ ಹೋದುವು.

ತಿನ್ನ ಮುಕ್ಕಾ ಅಲ್ವುವೆ ವರ್ಸಕ್ಕೊಂಸ್ಸಲ ಹಣ್ಣು ಬತ್ತಾವೆ ಯಾ ಪುಣಾತ್ಮುರು ಅದ್ರೂವೆ ಮುರಕಂಡೋಗಿ ನಾಕಾರದಿನ ಇಕ್ಕೆಂಡು ತಿಂದ್ಕಳ್ಳೇಳು ಎನ್ನೋದೇ ಆಗಿತ್ತು ಬಸವಯ್ಯನ ಆಸೆ. ನಾವೇನು ನೀರುಯ್ದು ಬೆಳಸಿದ್ದಲ್ಲ. ಅದಾಗೇ ಬದಿನಗುಟ್ಟಿರೋದು. ಯಾರು ಯಾವ ಮರದ ಹಣ್ಣು ತಿಂದು ಬೀಜುವಾ ಉದುರಿಸಿದ್ದೋ? ಯಾವ್ದರಾ ಪ್ರಾಣಿ ಪಕ್ಷಿ ಯಂದ್ಲು ತೊಟ್ಟೋ ಅಥುವಾ ಮನುಸ್ರು ಮನ್ನೇವ್ರು ಹಣ್ಣು ತಿಂದು ಉಗುಳ್ದ ಬೀಜವೊ. ಅಲ್ಲಿ ನೆಲಕ್ಕುದಿರಿರಬಹುದು ಹಲಸಿನ ಬೀಜ.

ಅದು ಹುಟ್ಟಸಕಿ ನೀರೊಯ್ದು ಬೆಳಿಸ್ದ ಮರವಂತೂವೆ ಅದಲ್ಲ ಬಿಡಿ. ತುಂಬೊಳ್ಳೆ ತಳಿ ಚಂದ್ರುತೊಳೇದು. ರುಸಿಯಂತೂವೆ ಜೇನು ಬೆಲ್ಲ ಸರಿವ್ಕಂದು ತಿಂದಗಾಗುತ್ತೆ ಅಂದ್ಕಂತ್ತಿದ್ದ ಬಸವಯ್ಯ, ಅದೇ, ಹಲಸಿನ ಮರದು ಪಟ್ಗೆ ಬ್ಯಾಸಾಯ ಹೂಡಾಕ ಬಂದಾಗುಲೆಲ್ಲವಾ.

ಕರಿಕಲ್ಲು ಬಾರೆ ಹೊಲ್ದಮಾಳದಲ್ಲಿ ಕುರಿ ಬಿಟ್ಕಂಡು ದೂರದಲ್ಲಿ ಕಾಣೋ ಅವ್ನ ಹಲಸಿನ ಮರದು ಪಟ್ಟೆನೇ ನಿಟ್ಟಾಕಿದಂತೆ ದಿಟ್ಟಿಸಿ ನೋಡ್ತಾ ಕೂತಿದ್ದ ಬಸವಯ್ಯ.

ನದಿ ನೀರು ಹರುಸೋಕೆ ಸರ್ಕಾರದೋರು ಹೊಳೆ ಮಾಡೋಕೆ ಭೂ ಕೇಳಿದ್ರೆ ಮುಂದ್ಲ ವರ್ಷಕ್ಕೆ ಮರವೂ ಹೊಲವೂ ಮಂಗ ಮಾಯವಲ್ಲ ಎಂದು ಬಸವಯ್ಯನ ಮನುಸು ಒಂದೇ ಸಮನೆ ಬೇಯುತ್ತಿತ್ತು.

ಹೊಲಾದಿಗುಂಟಾವಾ ಅಲ್ಲಾದೆ ಬಂದ ಕುಲುಮೆ ಶಂಕರಯ್ಯನ್ನ ಕಂಡು, ಎಲ್ಗೋಗಿದ್ದೆ ಶಂಕರಯ್ಯ ಈ ಉದ್ದನ್ನುರಿಬಿಸಿಲ್ನಾಗೆ ಎಂದು ಕರೆದು ಮಾತಾಡ್ತಾವಾ, ಇಬ್ರೂವೆ ಅತ್ತ ಹಳ್ದ ದಿಣ್ಣೆ ಕೆಳಾರದಲ್ಲಿದ್ದ ಅಳಲೆ ಮರದು ತುದಿ ನಳ್ಳಾಗೇ ಕೂತ್ಕಂದ್ರು. ಮಗಳು ಮದಿವೆ ಒದಿಗೇದೆ. ಇರಾದು ಇಲ್ದುದ್ದು ಕೂಡಿಕ್ಕೆಬೇಕು.

ಯಾವ್ದು ಇಲ್ದುದ್ರುವೆಯೂ ನಡಿಯಲ್ಲವಲ್ಲ ಬಸವಯ್ಯ. ಇಂಗೆಯಾ ಅಣ್ಣಾಪುರುದಾಗೆ ಕಂಡೋರಿದ್ರು. ಒಂದಿಷ್ಟು ದುಡ್ಡಾ ಸಾಲ ಕೇಳನಾಂತ ಹೋಗಿದ್ದೆ. ಬಿರುನ್ನ ಬರನಾಂದ್ಕಂಡೆ, ಕೂತೆ. ಕಂಡೋರಲ್ವಾ , ಉಂಡೋಗುವಂತೆ ಕೂತ್ಕ ಅಪುರೂಪುಕ್ಕೆ ಬಂದಿಯಾ ಅಂತಂದ್ರು. ಅಂಗೂವೆ ಟೀ ಕುಡ್ದು ಎದ್ದೊಲ್ಟೇ ಬಿಟ್ಟೆ ಅಂತನ್ನು. ರಂಗಧಾಮಣ್ಣ ಇದ್ದುದ್ದು; ಹೇಳಿ ಕಳಿಸ್ದಂಗೆ ಬಂದಿಯಾ, ಇರು ಹೋಗಂತೆ ಹೋಗೋದು ಇದ್ದುದ್ದೆಯಾ ಇನ್ಯಾತ್ರುದಾರಾ ಮಾಮೂಲಿಯಾಗಿದ್ರ ಹೋಗು ಅನ್ತಿದ್ದೆ. ರಾತ್ರಿ ಓತಮರಿ ಬಾಡು ಪಾಲು ತಂದಿದ್ದೆ. ಹಿಟ್ನೆಸ್ರು ಇನ್ನೇನು ಉಕ್ಸಿ ಮುದ್ದೆ ತೊಳುಸ್ತಾರೆ ಇರು ಉಂಡೇ ಹೋಗುವಂತೆ ತೀರಾ ಹೊತ್ತುಂಟವಾ ಅಂತಂದ್ರು. ಅಷ್ಟೊತ್ಗೆಲ್ಲಾವ ಬಿಸುಲು ರೇಗೇ ಬಿಡ್ತು. ಎಂದ ಕುಲುಮೆ ಶಂಕರಯ್ಯ. ಓತ ಮರಿ ಬಾಡು ಒತ್ತಟ್ಟಿಗಿರಲಿ, ದುಡ್ಡಾದುವ ಸಾಲ ಕೊಡ್ತೀವಿ ಅಂದ್ರ, ಕೈ ಎತ್ತಿದ್ರಾ. ಹೋದ ಕೆಲಸ ಆಯ್ತು ತಾನೆಯಾ ಎಂದು ಬಸವಯ್ಯ ಅನ್ಗುಜಿನ್ಗು ಮಾತಲ್ಲೇಯಾ ಉಸ್ರುಸ್ದಿ.

ಅಯ್ಯೋ ನಮ್ಮ ಗಾಚಾರುಗುಳುವೆ ನೆಟ್ಗಿರುಬೇಕಲುವಾ, ಇದ್ದಂಗಾಗುತ್ತೆ. ಎಂದು ನೆತ್ತಿ ಮೇಲೆ ಕೈಯೂರಿ ನೆಲ ನೋಡ್ತವಾ ಮಗ್ಗ ನಿಂತೋಗೆವಂತೆ ಧಾರಣೆ ಬಿದ್ದೋಗೆವೆ ಈವಾಗ ಸಾಲ ಕೊಡೊಕೆ ಕೈ ನಡಿಯಲ್ಲಾ ಅಂದ್ರು, ಕಾರ್ಯಯೇನು ನಿಲ್ಲುತ್ತಾ. ಆಗ್ಲೆಯಾ ಮಾತು ಕತಿ ಮುಗುದು ಮನೆಜಯವೂ ಆಯಿತು. ಅನ್ನ ಸೊಪ್ಪಿಗೆ ನೇರೂಪಾಗಿರೊ ಮನಿತನ ಸಿಕ್ಕೈತೆ. ಬಿಡಕಾಗದು, ಅಂತವಾ ಯಣಗಬೇಕಾಗಿದೆ. ಏನ್ಮಾಡದು? ಬಸವಯ್ಯ ತೇಯ್ಕಂದು ಕುಡಿಯನಾಂದ್ರೆ ಮನಿ ಒಳ್ಗೆ ಒಂದಾಣಿಲ್ಲ. ಮುಡುಪು ಕಟ್ಟೋಕು ಮೂರಾಣಿ ಇಲ್ದಂಗಾಗೈತೆ, ದೇವ್ರಿಟ್ಟಂಗಾಗುತ್ತೆ ಅಲ್ವಾ? ಮದುವೆ ಮಾಡಿಕೊಡಾಕೊಪ್ಪೀನಿ, ಅಂದು ಊರು ಕಡೆಗೆ ಮಖ ತಿರಿಗಿಸ್ದ ಕುಲುಮೆ ಶಂಕರಯ್ಯ. ಕೂತ್ಕಳಯ್ಯ ಹೋಗುವಂತೆ. ಈ ರಣಬಿಸಲೊಳಗೆ ಹೋಗಿ ಇನ್ನೇನು ಮಾಡಿಯಾ. ಗ್ಯಾರಘಟ್ಟ ತಲುಪೊದು ಎಷ್ಟೊತ್ತಾದಾತು ಇಳಿ ಹೊತ್ತಿಗೆ ಹೋದ್ರಾತು ಅಂತಂದ ಬಸವಯ್ಯ ಮಾತಿಗೆ ಶಂಕರಯ್ಯನೂವೆ ತಡಾಕೊಂಡ.

ಅಷ್ಟೊತ್ತಿಗೆ ಆಗಲೇ ಒಪ್ಪೊತ್ತಾಗಿತ್ತು. ಕುರಿ ಕರಿಕಲ್ಲು ಹೊಲ್ದ ಬಾರೆ ವಾಲು ಡೊಡ್ಡೇಣುಗುಂಟಾವ ಅಲ್ಡಿಕಂಡು ಮೆಲಕಾಡಿ ಮೇಯತೊಡಗಿದ್ದವು. ಬಿಸಿಲು ರವುಸಿಗೆ ಬಾಯಾರಿ ಏನು ಹಸ್ರು ಮೇದ್ರೂವೆಯೂ; ಅವೂವೆ, ನೀರಿಗೆ ರಾಪಾಡವು.

ವಾರದುತಟಿಗೂ ಹೊಸ ನೀರು ಕುಡ್ದು ಒಂದೊಂದು ಕೆಮ್ಮವು. ಕೆಲುವು ದಮ್ಮುಕಟ್ಟಿ ಸೀನವು. ಇನ್ನ ಕೆಲುವೊ, ಒಂದಕ್ಕೊಂದು ಉಂಡುಸುತ್ಕಂದು ಬಿಸುಲು ತಡಿಲಾರದೆ ಬಾಯಾರಿ ಅವು ಒಂದಕ್ಕೆ ಇನ್ನೊಂದು ಸುತ್ತಾಕ್ಕೊಂಡು ಸುತ್ತಾಕ್ಕೊಂಡು ಬೇಲಿ ನೆಳ್ಳು, ಮರದ ಹಡಿಯಾ ತಿರಗಾಡಿ ತಗ್ಗಿಗೆ ಇಳಿತಿದ್ದುವು ಅವಾಗಲೇಯಾ ನೀರಿಗೆ. ಬಸವಯ್ಯ ಮುಂದೆ ಎಂತೆಂತವು ಬತ್ತಾವೊ ಅಂಗಭಂಗ ಆಗ ಆಗ್ತಾವೆ ಅಂತಂದು ಆ ವರ್ಸದು ಪಟ್ಲಿಮರಿಗುಳ್ನ ಅನಿನ್ನೂವೆ ಮಾರಿರುಲಿಲ್ಲ. ಅವುಗಳ ಬೀಜವಾ, ಕಶಿನೂ ಮಾಡ್ದೆ; ಹಾಗೆ ಉದಿ ಒಳ್ಗೆ ಇಟ್ಕಂಡಿದ್ದ. ಅವೆಲವಾ ಮೀರಿದು ಟಗುರಾಗಿದ್ದುವು ಕುರಿ ಒಳಗೆ. ಪರಮಗುರಿಗಳ್ನ ಅವು ಮೇವುವಾಡಲೂ ಬಿಡೊವಲ್ಲಾ. ಒಡಾಸ್ಸಿ ಇಕ್ಕೋವು ಕುರಿಕಟ್ಟೋದೆ ಅವ್ಕೊಂದು ಸಿರಿ. ಪರಮುಮರಿಗಳ ಬಾಲ ಮೂಸ್ತಾವಾ ತಿರಗಾಡ್ಸಾವು. ಪರಮುಗುಳು ಅವುಕೂವೆ ಬೇಕಾಗಿದ್ರೂವೆ ತಪ್ಪಿಸ್ಕಳಂಗಾಡಿ ಕಟ್ಟೋಕೆ ಬಂದ ಟಗರುಗುಳಾ ಓಡಾಡ್ಸಿ ಓಡಾಡ್ಸಿ ಓಟೊಂದೂರ ಓಟೊಂದೂರ ಓಟಕಿತ್ತವ್ರುಂಗೆ ನುಸ್ಕಂಡು ನುಸ್ಕಂಡು ಓಡೋಗವು ಅಲ್ಎದಲ್ಲೆಯಾ ಹಿಂಡಿನು ಕುರಿಯೊಳಗೆ ಕಣ್ಮರಿಯಾಗೋವು.

ಆಗಲೇ ಮುಂಗಾರು ಮಳೆ ಚನ್ನಾಗಿ ಹನಿಯೊಡ್ದು ನೆಲ ತನುವಾಗಿ ದನಕರಿಗೆ ಹೊಸ ಮೇವಾಗಿತ್ತು. ಕರಿಕಲ್ಲು ಬಾರೆ ಹೊಲ್ದ ಬೀಳು, ಬದುಗುಳು, ತಗ್ಗಿನು ಜಾಗುಗಳೆಲ್ಲಾವ, ಗುತ್ತಿ ತಾವೆಲ್ಲಾ ಹುಲ್ಲು ಕಡ್ಡಿ ಚಿಗುತು ಹಲ್ಲಿಗೆ ಚುಚ್ಚೊಂಗಾಗಿ ಕುಡಿ ಮೇಲೆಸಳಿಕ್ಕಿತ್ತು. ಗಂಧ್ಗರಿಕೆ ದಿಂಡು ಗೆಣ್ಣಿಕ್ಕಿ ಎತ್ತೆತ್ತಲೊ ಗಂಬ ತಿರುಗಿ ಸುತ್ಲುವಾ ಬಳ್ಳೆರಿದು ಕುರಿಬಾಯಿಗೆ ಸಿಕ್ಕೋವಷ್ಟಾಗಿತ್ತು, ಯಲವಾ. ಮುಂಗಾರು ಮಳಿಗೆ ನೆಲಂದು ನೆಲವೆಲ್ಲಾ ಕರಿಕಲ್ಲು ಬಾರೆ ಒಳಿಗೆ ಭೂಮಿ ಹುಲ್ಗರಿದಿತ್ತು. ಮುಂಗಾರು ಮಳೆ ಚನ್ನಾಗಯೇ ಒದಗಿ ಬಂದಿದ್ದರ ಪರಿಣಾಮವಾಗಿ. ಬೀಳೂಲಿ ಮೇವು ಕುರಿ ಮೇದರೆ ಕಾಯಿಲೆ ಬೀಳೋವು. ಆದರೆ ಗಂಧಗರಿಕೆ ಹುಲ್ಲು ಮೇದ್ರಂತೂ ಕುರಿ ಓಳ್ಳೆ ನಡಾಗವು. ಬೆನ್ನುರಿ ದಿಂಡಾಗಿ ನಡಾ ಹಿಡುದ್ರೂ ನಡ ಸಿಕ್ತಂಗೆ ನಡು ಬಲ್ತು ರಾಸಾಗವು. ಮುಂಗಾರು ಮಳಿ ಮೋವು ಬಿಸುಲು ಬೆರೆತು ಇನ್ನೇನು ಅಗಾ ಇಗಾ ಅನ್ನೋ ಹೊತ್ತಿಗೆ ಭೂಮಿಗೆ ಬೀಳೊ ಮಳಿ ಘಮ್ಲುಗೆ, ಟಗರುಗಳಿಗೊ ಒಳಗೊಳಗೇ ಬೆದೆ ಧೂಳೆದ್ದು, ಅವು; ಈವಳ್ಳಿ ಪರಮಗಳ ಮೇಲೆ ಉಗ್ಗಾಡವು. ಅವುಗುಳಿಗೆ ಅದಿರತ್ತಿ ಕುರಿ ಒಳಗೆ ಎದ್ದಾಡವು. ಹೆಣ್ಮರಿ ಪರಮಗಳನ್ನ ಅತ್ತಿತ್ತಾವಾ ಓಡ್ಸಾಡವು. ಪಟ್ಲಿಗಳಿಗೂ ಬೆದಿ ಹೆಚ್ಚಾಗಿ ಅವೂವೆ ಕುರಿ ಅಟ್ಟಾಡಲು ಹೋಗಿ ಹಿರೀಖ ಟಗರುಗಳಿಂದ ದಡಾರನೆ ಗುದ್ದಿಸಿಕೊಂಡು ಬಿದ್ದು ಮೂರುಲ್ಡಾಗಿ ಅತ್ತಾ ಇತ್ಲಾಗಿ ಪಲ್ಟಹೊಡ್ದು ಎದ್ದೊಡೋಗವು ಕುರಿ ಕಟ್ಟಾಕೆ ಹೆಣ್ಣರಾಸುಗಳ ಹಿಂದಿಂದೆಯಾ.

ಹುರಿಯಾ, ಅದರೆತ್ತೋಳು ಯಂಡ್ರನಾಕಾಯ. ಅವೇನು? ಕುರಿಗಳು ಬಾಲ ಮೂಸ್ಕಂದು ಪರಮುಗಳ ಒಡಡ್ಸುತ್ತವಲಾ ಮೇಯಾಕುವೆ ಅವುನ್ನು ಬಿಡುದಂಗೆ. ನನ್ಣೆತಿವೆ, ನಾನು ನಿಮ್ಮುನ್ನ ಬೀಜ್ದಗಿರೋಕೆ ಬಿಟ್ಟುದ್ದೆಯಲ್ಲಾ, ಬೀಜವೊಡ್ದರೆ ನೀವೇ ಸರಿಯಾಗ್ತಿರಾ, ನನ್ನಣ್ತಿ ರಗತ್ಗಾಳ್ನಾವೆ. ಇವತ್ತೈತೆ ನಿಮ್ಮುಗೆ ಕುರಟ್ಟಿತವಾ, ನಡೀರಿ ಎಂದ್ಕಂದು ಬಸವಯ್ಯ ಪರಮಗಳನ್ನು ಅಟ್ಟಾಡಲು ಮುಗಿಬೀಳುತ್ತಿದ್ದ ಪಟ್ಲಿಗಳನ್ನು ಅದ್ಲುಸುತ್ತಾ, ಕುಲುಮೆ ಶಂಕರಯ್ಯನ ಕಡೆ ತಿರುಗಿದ ಮಖ ಒಡ್ಡಿ ಅವನತ್ತವಾ ಕೈ ನೀಡಿ ತಗಳಯ್ಯಾ ಒಂಸಿಗಳು ತರುಕುಲು ಎಲೈತೆ ಅಂಗೆಯಾ ಬಾಯಾಡು ಎಂತಂನ್ನುತ್ತಾ ಸಿಗುಳು ಎಲೆ ಒಂದಪ್ಪು ಅಡಿಕೆನೂವೆ ಕೊಟ್ಟು ಎಲಡಿಕೆ ಚೀಲುಕ್ಕೆ ಕೈಯ್ಯಾಕಿ ಸುಣುಕಾಯಿ ತಡಕಿ ಆಚೀಕೆ ತಗುದು ಶಂಕರಯ್ಯನ ಕೈಯ್ಯಾಗುಳ ಸಿಗುಳು ತರುಕುಲೆಲಿ ಬೆನ್ನಿಗೆ ಈಟು ಸುಣ್ಣ ನೊರುದ. ಸುಣ್ಣ ನೊರಕಂಡ ಒಣಗಿದ ಇಳ್ಳೇದೆಲಿನೂವೆ ಅಪ್ಪು ಅಡಿಕೆ ತುಂಡುನೂವೆ ಮುದುರಿ ಉಂಡ್ಮಾಡ್ಕಂಡು ಡವ್ಡುಡಿಗೆ ಒತ್ಲುಸಿಕೊಂಡ ಕುಲುಮೆ ಶಂಕ್ರಯ್ಯ, ಯಂಗವಾ ಕಣ್ಮುಂದೆ ನಾಕಾರು ರಾಸು ಕುರಿ ಇರೋತ್ತಿಗೆ ನೀನೇನೊವಾ ಜಟನ್ನಾದೆ ಕಣೊ ಬಸವಣ್ಣಾ, ನಮ್ಮ ಪಾಡು ಸಿವುನಿಗೆ ಮುಟೈತೆ ಅದ್ಕಂತವಾ ಎಲಡಿಕೆ ರಸವಾ ಬಾಯೊಳಗಿಂದ ಅಲ್ಲೆಯಾ ಅತ್ಲು ಕಡಿಕೆ ವಾರಾಗಿ ತುಪುಕ್ಕನೆ ಉಗ್ದ. ಬಿಸಿಲ ಹವೆ ತಡಿಲಾರದೆ ಮುದಿ ಕುರಿಗಳು ಮೇಯಕೂ ಆಗದೆ ಗೊಣ್ಣೆ ಸುರುಸ್ತಾವ ನಲುಕ್ಕೆ ಮುಸುಣಿ ಊರಿ ನಿಂತೇ ಇರೋವು. ಗೊರವಂಕದ ಹಕ್ಕಿಗಳು ಹಾರಿ ಬಂದು ಆ ಗೊಣ್ಣೆ ಕುರಿಗಳ ಮೂಗಿನ ಸೆಂಬೆ ಮೂಸು ನೋಡಿ ಮತ್ತೆ ಪುರ್ರಂತವಾ ಎತ್ತೆತ್ತಲೋ ಹಾರಾಡುತ್ತಿದ್ದುವು.

ಉಣ್ಣೆಗೊರುವ ಹಕ್ಕಿಗಳು ಹಾರಿ ಕುರಿ ಮೇಲೆ ಕುಳ್ತು ಸವಾರಿನೂವೆ ಮಾಡೋವು.

ಒಕ್ಕುಲುತನ ಹಿಂದೆ ನಡುದಂಗೆ ನಡಿತಿಲ್ಲಾ. ಕುಲುಮೆ ಇಕ್ಕೋದೆ ಅಪುರೂಪುಕ್ಕೆ ಆಗೇದೆ. ಕುಲುಮೆ ಇಕ್ಕಿರೂವೆ ಜನುವೇ ಬರಲ್ಲ. ಆವಗೆಲ್ಲಾವಾ ಮುಂಗಾರು ಮಳಿ ಹನಿಯಾದನ್ನೇ ಕಾದು ಜನ ಕುಲುಮೆ ಮನಿತವಾ ಬರೋರು. ಅವರ ಅವುಸ್ರುಕ್ಕೆ ನಾವು ಕುಲುಮೆ ಇಕ್ಕಬೇಕಾಗಿತ್ತು. ಬ್ಅಸಾಯ್ದದೋರು ಬಯ್ಯೋರು ಕುಲುಮೆ ಇಕ್ಕೋದು ನಾಕ್ದಿನ ತಡುವಾದ್ರೆ. ಕುಲುಮೆ ಶಂಕ್ರಯ್ಯನಿಗೆ ಇಸಲ್ದವು ಆಯ್ದ ಕಾಳು ಹೆಚ್ಚಾದು ಅಂತವಾ ಕಾಣುತ್ತೆ. ಈ ವರ್ಸ ಕಣುತ್ತಾವು ಬರುಲಿ ಐತೆ ಶಂಕರಯ್ಗೆ. ಮುಂಗಾರು ಮಳಿ ಒದುಗಿ ಅಸ್ವಿನಿ ಮಳಿ ಮುಗುದ್ರುವೆ ಕುಲುಮೆ ಇಕ್ಕದಿದ್ರೆ ನಾವು ಎತ್ತೋಗದು ಅನ್ನೋರು.

ಹೊಸ ಮಳಿಯಾದ್ರೆ ಕುಲುಮೆ ಮನಿ ಮಂದೆ ಜನ ಜಿನಗದು. ಅತ್ಲಾರು ಇತ್ಲಾರು ಬರುತ್ತಲೇ ಇರೋರು. ಅವ್ರುನ್ನ ಸಂತ್ಲಿಕ್ಕಿ ಸಾಗಾಕದೇ ಆಗೋದು ನನಿಗೆ ಬಿಡುವಿಲ್ದ ಕೆಲಸ. ನೇಗ್ಲು ಎದಿ ಮೇಲೆ ಬಡಿಯೋ ಜಿಗುಣಿಯಿಂದ ಹಿಡುದು ಹಿಟ್ನು ಸ್ವಾರೆ ತಳಕೆರಿಯೋ ಕೆರಿಯೋಲೆವರುವಿಗೂವೆ ಅದು ಇದು ಅಂತಾವಾ ಬ್ಯಾಸಾಯ್ದೋರು ಕುಲುಮೆ ಮನಿ ಹುಡಿಕೊಂಡು ಬರೋರು ಅಂತೀನಿ.

ಭರುಣಿ ಮಳಿಗೆ ಭೂಮಿ ಬೀಜ ಕಾಣೋಕು ಮೊದುಲೇಯಾ ಕುಳ, ತಾಳು, ಕುಡ್ಲು ಸಾಗೊಯ್ಯೋದು ಅವುಗುಳು ತೊಟ್ಟು ತುದಿ ಮಾಡೋದು ಕುಲುಮೆ ಕೆಲ್ಸಗುಳು ಒಂದರಿಂದೆ ಇನ್ನೊಂದು ತಡಾಯ ಬರೋವು. ಈಗೆಲ್ಲವಾ ಟ್ರಾಕ್ಟರ್ ಬ್ಯಾಸಾಯ ಬಂದುವು, ಬಸವಣ್ಣ. ಬ್ಯಾಸಾಯವೇ ಮಿಸಿನ್ ಮ್ಯಾಲಿ ನಡಿಯಂಗಾತು. ಕೊಯ್ಲು ಮಂತಾಗಿವೆಯೂ ಮಿಸಿನ್ನುಗುಳೇ ಮಾಡ್ತಾವೆ. ಬಾಯಾಗ್ಳ ತೊಂಬ್ಲವಾ ದವುಡೆ ಸಂದಾಗೇ ಲೊಡುವಾಡುತಾ ಶಂಕರಯ್ಯ ಹಿಂದಿನ ಕುಲುಮೆ ಬದುಕ ಅಂಗ್ಲಾಪಿಸ್ಕಂಡ. ಕುರಿ ಯತ್ತೋದುವೊ ಅಂತವಾ ಬಸವಯ್ಯ ಕರಿಕಲ್ಲು ಬಾರೆ ಬಡಗಲಾಗಿ ತಿರಿಕಂಡ ಕೂತುತ್ತಾವ್ಲುಲಿಂದಲೇ.

ದೂರದಾಗೆ ಯಾರೋವಾ ತಲಿ ಮ್ಯಾಲೆ ಏನೋವಾ ಹೊತ್ಕಂಡು ಕಂಕುಳುದೊಳಿಗೆ ಎಡ ರೊಂಡಿ ಮ್ಯಾಲೆ ಅದೆನೋ ಇರಿಕಂಡು ಹಲಸಿನ ಮರದ ಹೊಲಾದೆಗೇ ಬರೋದು ಶಂಕರಯ್ಯಗೆ ಮಂಜಮಂಜಾಗಿ ಕಂಡಂಗಾತು. ಹಣಿ ಮೇಲೆ ಅಂಗೈ ಅಡ್ಲಾಗಿ ಹಿಡ್ದು ಅಂಗೇ ನೋಡ್ದ. ಬರೋಳು ಹೆಂಗಸ್ಸೆಯಾ ಅಂತವಾ ಮನುದಟ್ಟಾತು ಅಂದ್ಕಳಿ. ಬಸವಯ್ಯನೂವೆ ಅತ್ತಲಿಂದ ಬರೋಳು ನಮ್ಮನೇಳೆ ಇರುಬೇಕು ಅಂದ್ಕಂಡ. ಹತ್ರಹತ್ರ ಆದಂಗೆ ಬತ್ತಿದ್ದೋಳು ಶಂಕರಯ್ಯನ ಹೆಣತಿ ಸಣ್ಣಕ್ಕ. ತಲಿ ಮ್ಯಾಲೆ ಸಗಣಿ ತಟ್ಟಿ ಹೊತ್ಕಂಡು, ಎಡ ರೊಂಡಿ ಕಂಕುಳ್ದ ಒಳಿಗೆ ನೀರು ಕುಂಬವಾ ಇರಿಕಂಡು ಸಣ್ಣಕ್ಕ ಕರಿಕಲ್ಲು ಬಾರೆ ಬಡುಗುಲು ಅಡ್ಡೇಣು ಇಳಿತಿದ್ಲು.

ಎದ್ದ ಆಕಡಿಯಾ ಹೋಗಿ ಬರೋಳು ಸಣ್ಣೆಯಾ ಅದ್ಕಂಡು ಅಲ್ಲೇ ವಾರಾಚೆಗಿದ್ದ ಬಂದ್ರೆ ಗಿಡ್ದು ಮಗ್ಗಲಿಗೆ ವಾರಾಗಿ ಕುಂತು ವಂದಾ ಮಾಡಿ ಎಲಡಿಕೆ ಉಗ್ದು ಮತ್ತೆ ಶಂಕ್ರಯ್ಯನತ್ರವಾ ಬರೋಕೆ ಮೇಲೆದ್ದ ಬಸವಯ್ಯ. ಇವ್ನು ಒಂದಾ ಮಾಡ್ದ ವಾಸ್ನೆಗೆ ಅವೆಲ್ಲಿದ್ದವೊ ಅನ್ನಂಗೆ ಬಂದ್ರೆ ಗಿಡ್ದ ಬಡ್ಡೆಗುಂಟವಾ ಕಟ್ರೆ ಗೇಣಿಕ್ಕಿ ಹರುದು ಬಂದುವು. ಸಾಲಿಕ್ಕಿ ಬಂದ ಅವು ಬಸವಯ್ಯನು ಹೆಜ್ಜಿಗೆಲ್ಲಾವ ಮುಸ್ರಿದುವು. ಬುದೂರನೆ ಎದ್ದ ಅವ್ನು ಕಾಲು ಕೊಡುವುತಾ ಬಂದು ನೀನು ಸಿಕ್ಕಿ ಏಸೊಂದು ದಿನಾದುವು ಶಂಕರಯ್ಯ. ಹೋದ ಸಿವುರಾತ್ರಿ ಹಬ್ಬ ಸಂತೆ ದಿನ ಚಿಕ್ಕನಾಯಕನಹಳ್ಳಿ ಸಂತೆಹೊರೇಲಿ ಸಿಕ್ಕಿದೋನು ನೀನು ಅಸಾಮಿ. ಆದರಾಚಿಕೆ ನಮ್ಮಿಬ್ರುಗೂವೆ ಮಖ ಭೇಟಿ ಆಗಲೇ ಇಲ್ಲುವಲ್ಲಾ ಶಂಕರಯ್ಯ. ಅಪುರೂಪುಕ್ಕೆ ಸಿಕ್ಕಿಯಾ ಕೂತ್ಕಳನ ಇರು ನಮ್ಮ ಸಣ್ಣಿ ಬತ್ತಾವುಳೆ. ಇನ್ನೊಂದು ಸಲಕ್ಕೆ ಎಲಡಿಕೆ ಆಕೆಳುವಂತೆ ಎಂದು ಶಂಕರಯ್ಯ ಮತ್ತೂ ಎದ್ದೊಲ್ಟೋನ್ನ ಬಸವಯ್ಯ ಅಲ್ಲೇ ಕೂರಿಸ್ಕಂಡ.

ಅಜ್ಜ ಬಸವಯ್ಯನು ನೆರಿವಿಗೆ ಕುರಿಯಿಂದೆ ಬಂದಿದ್ದ ಮೊಮ್ಮಗ ವಾಸು ಅಲ್ಲೇ ಹೊಲ್ದ ತಲಿನಾಗೆ ಕುರಿ ಮುಂಗಾರೊಲ ಅಡ್ಡಾಯದ ಹಾಗೆ ನಿಗುವಾಗಿ ನಿಂತು ಅದೆಂತವೊ ಅವುನಿಗು ತಿಳ್ದವು ಓಸು ಪದವ ಸಿಳ್ಳಾಕಿ ನುಡುಸ್ತಿದ್ದ. ವಾಸುಗೂ ಒಪ್ಪತ್ತೊನೊತ್ತಿಗೆ ಹೊತ್ತಿನಂತೆ ಹೊಟ್ಟೆಸ್ತಂಗಾಗಿ ಏನಾದ್ರೂ ಕುರುಕುಲು ಬೇಕನ್ಸಿ ಹತ್ರುದಲ್ಲೇ ಕಾಣುತಿದ್ದ ಹಣ್ಣೀಸಲು ಮರಕ್ಕೆ ಒಮ್ಮೊಮ್ಮೆ ಕಲ್ಲು ತೂರನು ವಾಸು. ಅವುನು ಎಸ್ದ ಕಲ್ಲು ಒಂದೊಂದು ಈಸ್ಲಣ್ಣಿನು ಗೊನಿಗೆ ಬಡ್ದು ಒಂದೊ ಎರಡೋ ಈಸ್ಲು ಕೆಂಗು ಉದರೋವು. ಅವುನ್ನೇಯಾ ಅವುನು ಅಗೊಂದು ಇಂಗೊಂದು ಬಾಯಾಡೊನು. ಕುರಿಕೋಲಾಕಿ ಗಿಡಗೆಂಟೆ ತಡ್ಕೋನು. ಬೆಳುವುನೊ ಗೌಜುನೋ ಮೊಟ್ಟೆ ಇಲ್ಲೆಲ್ಲಾದ್ರೂವೆ ಇಕ್ಕೆವೇನೋ ಅಂತವಾ ಬಡ ಬುಡ ಅದ್ಬಿಟ್ಟು ಇದ ಇದ್ಬಿಟ್ಟ ಅದ ಗಡ ಗಿಡವಾ ತಡಕೋನು ಜೊತೆಗೆ ಕುರಿನೂ ನಿಗಾವಾ ಮಾಡೋನು.

ಸಣ್ಣಕ್ಕ ಹಲಸಿನ ಮರದ ಪಟ್ಟೆಗಾದು ಮಟ್ದಗುಂಡಿ ಬದಿನುಗುಂಟವಾ ಅಲ್ಲೇ ಹಾಳೊಳಿಕೆ ಇಳ್ದು ಹಿಪ್ಪೆಮರದ ಹಡಿಲಾದು ಅತ್ತ ಕೆಂಗಾಡು ಪಟ್ಗಿಗೋಗ ಒಳ್ಳಣಿ ಮೂಗುತ್ತುದು ತುದಿ ಮಗ್ಗಲಾಗೇಯಾ ತಡಾಯ್ದು ಕೊಪ್ಪಲು ಪಟ್ಟೆ ಬೇಲಿ ಒಬ್ಬಗೇ ಇವ್ರಿಬ್ಬುರುವೆ ಕುಂತು ಮಾತಾಡತಕೇ ಹಳ್ದದಿಣ್ಣೆ ಕೆಳ್ನೆಲದಗಿದ್ದ ಅಳಲೆ ಮರದ ಹತ್ರುಕೇ ಅವುಳೂವೆ ಸಣ್ಣಕ್ಕ ಬಂದ್ಳು. ಕಂಕುಳುದೊಳುಗುಲು ನೀರು ಕುಂಬವಾ ಸೊಂಟ್ದ ಮ್ಯಾಗ್ಲಿಂದವಾ ಅತ್ಲಾಗಿ ನೆಲ್ಕಿಳಿವಿ, ಅಂಗೆಯಾ ಒಂದ್ಕಡಿಕೆ ಒನ್ಕಂಡು ಬಸವಯ್ಯ ಕಡೆಗೇ ಅವುಳೂವೆ ಕೈಯ್ಯಾರವಾದ್ಲು. ಸಣ್ಣಕ್ಕಾ, ಚನ್ನಾಗಿದಿಯಾ; ಅಂದು ಕುಲುಮೆ ಶಂಕರಯ್ಯ ಅವಳತ್ತವಾ ತಿರಿಕಂಡ. ಬಸವಯ್ಯ ಅಲ್ಲೆ ಅಳಲೆ ಮರದು ಬುಡ್ದಿಂದ ಕೈ ಅಳ್ತತ್ಗೇ ಸಿಕ್ಕ ಮುತುಗ್ದು ಎಲೆ ಕೊಯ್ಕಂದು ದೊನ್ನೆ ಮಾಡಿ ಕುಂಬದೊಗ್ಳ ನೀರು ದೊನ್ನಿಗೆ ಬಗ್ಗಿಸ್ಕಂಡು ಕುಡಿತಿಯಾ ಶಂಕರಯ್ಯ ಅಂತವಾ ನೀರುದಿನ್ನೆಯಾ ಅವನತ್ತಿಡ್ದ. ಒಂದೊನ್ನೆ ನೀರು ಕುಡ್ದ ಅವುನು, ಸಣ್ಣಕ್ಕ ನೀರಿನು ಜೊತೆಗೆ ಮಜ್ಜಿಗೆನೂ ತರದಲ್ವಾ ಎಂದ.

ಇಲ್ಕಣಯ್ಯೋ, ಕರೇವ್ನ ಎಮ್ಮೆ ಒದ್ಕಂದು ಕೋಣನ್ನ ತಗಂಡದೆ. ಇನ್ನೇನು ಹೊತ್ರಿಕೊ ಬೈಯಿಂದ್ಕೊ ಈಯಂಗಾಗೇತೆ ಅಂತಂದು ಸಣ್ಣಕ್ಕ ಸೊಂಟ್ದಾಗಿದ್ದ ಎಲಡಿಕೆ ಚೀಲವಾ ಈಸೀಕೆ ಇರಕಂಡ್ಲು. ನಮ್ದೇನೇಳನಪ್ಪ ಚಂದಾವಾ. ಎಮ್ಮಿಗೆ ಈಯೋ ಆಸೆ ಕ್ವಾಣಗೆ ಕೇಯೋ ಆಸೆ ಅನ್ನಂಗೆ ನಮ್ಮ ಬದುಕಿನ ಪಾಡು ಹೊಲಕೋಟು ಮನಿಗೋಟು. ಆರುಕ್ಕ ಅತ್ಲಿಲ್ಲ ಮೂರುಕ್ಕಿಳಿಲಿಲ್ಲ. ಹೋದ್ರು ಬಂದಂಗಿದಿವಿ ನರಕಲಿ ಮೇಲೆ ಜನ್ಮ ವರಕಂಡು. ಏಸೊಂದಿನ ಆದ್ಮೇಲೆ ಬಂದಿಯಾ ಶಂಕರಯ್ಯ ಕುಲುಮೆ ಕೆಲ್ಸ ಬಿಟ್ಟು ಅರಗಾಗಂಗಿಲ್ವೇನೋ. ಯಂಗೊ ನಿಂದೆ ಪಾಡು ಕಣಯ್ಯ ಅಂತವಾ ಸಣ್ಣಕ್ಕ ಹೊಲಾದಿ ನೆಡದು ದಣವಾದಳಂಗಾಗಿ ಬಿಸುಲು ದಗಿ ಅಂತವಾ ಮುಂಜೆರಗು ಮುಂದು ಮಾಡಿ ಗಾಳಿ ಬೀಸ್ಕಂತಾ ಕುಂತ್ಲು. ಅದೇನೊ ನೆನಿಸ್ಕಂಡಳಂಗೆ ಶಂಕರಯ್ಯನ ಕಡೆ ತಿರುಗಿ ಅವ್ನು ಮಖನೆ ಆತ್ಕಂಡಳಂಗೆ ಶಂಕರಯ್ಯ ಸಿಪ್ಪನು ಗೋರಿಲಿ ಹಿಟ್ನ ಸ್ವಾರೆ ತಳ ಗೋರಂಗಾಗೈತೆ. ಒಂದ್ಕೆರೆ ಬಿಲ್ಲೆ ಮಾಡಿಕೊಡು‌ ಅಂತ ಕೇಳಿದ್ದೆ. ವರ್ಷವೇ ಆತಲ್ಲಯ್ಯಾ, ಈ ವರ್ಷಲಾರ ಮಾಡ್ಕೊಡಯ್ಯ ಕೆರಿಯೋಲೆಯಾ ಅಂದ್ಲು ಸಣ್ಣಕ್ಕ. ಆಮ್ಯಾಲೆ ಗ್ಯಾನ್ಕತ್ತಿದಳಂಗೆ ಈ ವರ್ಷ ಆಯ್ಕೂವೆ ಬರಲಿಲ್ಲ. ನಿನ್ನವು ರಾಗಿರಬುಟೆ ಅಂಗೆಯಾ ಅವೆ. ಹಟ್ಟಿಗೆ ಬಂದೋಗು ಅಂತಂದ್ಲು ಸಣ್ಣಕ್ಕನೂವೆ, ಶಂಕರಯ್ಯ ಮರತನು ಅಂತವಾ.
ನೋಡವ್ವು ಸೂಲ್ದಮ್ಮ ಇವರ್ಸ ಮಗಳು ಮದುವೆ. ಅತ್ತಲಾಗಿ ಅವ್ಳು ಬಾಣಿತನ ನೆಡುದುದ್ದೇ ಆದ್ರೆ, ಅವ್ಳು ಹೆರಿಗೆ ಮಾಡಿಕೊಡು. ಈ ವರ್ಸ ನಿನ್ನವೇನು ಆಯ್ದರಾಗಿ ಬ್ಯಾಡ ಎಂದ.

ಸಣ್ಣಕ್ಕ ಊರಾಗಟ್ಟೇಗೆ ಹೆಂಗಸ್ರುನ್ನ ಹೆರಿಗೆ ಮಾಡುಸ್ತಿದ್ದುದ್ದರಿಂದವಾ ಅವುರೆಲ್ಲಾ ಸಣ್ಣಕ್ಕನ್ನ ಸೂಲ್ದಮ್ಮ ಸೂಲ್ದಮ್ಮ ಅಂತಿದ್ರು. ಅಯ್ಯೋ, ಹೆರಿಗೆ ಮಾಡಕೆ ನಾ ಯಾರತವುನೂ ಯಾವತ್ತೂ ಯೆಚ್ಚ ಕೇಳ್ದಳಲ್ಲಾ. ನಿನ್ನೊವು ಯಾಕಪ್ಪ ಆಯ್ದುರಾಗಿ ನಮ್ಗೆ. ವರ್ಸವರಿಯಾ ಕುಲುಮೆ ಕೆಲ್ಸ ಮಾಡಿಕೊಟ್ಟೀಯಾ, ಮನಿಗು ಬಂದು ರಾಗಿ ಅವೆ ತಗೊಂಡೋಗು ಅಂತಂದ್ಲು ಇನ್ನೊಂಸಲ.

ಮದವೆ ಹತ್ರ ಮಾಡ್ಕಂಡು ಬಾ. ಇಸು ಕಾಳುಕಡ್ಡೀನೂವೆ ಕುಂಡೋಗುವಂತೆ. ಉಂಡವುರೆಕಾಳು, ಒಣುಳ್ಳಿಕಾಳು, ಮಣ್ಣಿಕ್ಕಿರೋವು ತೊಗರಿಕಾಳು, ಪಲಾರದು ಕಾಳಿಗೆ ಹೆಸ್ರು ಕಾಳು ಕುಂಡೋಗುವಂತೆ ಶಂಕರಯ್ಯ, ಮದುವೆ ಹತ್ರುಬೀಳ ಬಂದೋಗು ಎಂದೇಳಿದ ಬಸವಯ್ಯ ಗ್ಯಾನುಕು ತಿಳ್ದನಂಗೆ ಮತ್ತೆ ಮಾತಾಡ್ತವಾ, ಕುಲುಮೆ ಇಕ್ಕಲ್ಲ ಅಂತವಾ ದಿಗಲು ಬೀಳುಬೇಡಾ. ಯಂಗೊ ಭಗವಂತ ಸಾಗುಸ್ತಾನೆ. ನಾವೂವೆ ಹೊತ್ತೋದಂಗೆ ಕೊಡಿ ಹಿಡಿಬೇಕಲ್ಲ ಶಂಕರಯ್ಯ. ನಮ್ಮ ಬಾಳೇನು ವೈನಾಗಿಲ್ಲ. ಕಾಯಿಲೆ ಕಸಾಲಾಗಿ ಕುರಿ ಅಡಕುವಾದುವು. ಬೋರುಮಿಲ್ಲು ಬತ್ತಿ ಇದ್ದಾವು ತೆಂಗಿನ ಮರ ಒಣಗಿವು. ಅಪ್ಪನು ಕಾಲ್ದಾಗೆ ಕುರಿ ಬಂಡ ಕತ್ರಸಾಕೆ ಕುರುಬುರು ಬರೋರು. ಅವ್ರು ಬಂಡ ತಗಂಡು ಹಿಂಡಿಗೆ ಹಾಲು ತುಪ್ಪ ತೊಳಿಯೋರು. ಏನು ಅವ್ರು ಕೈ ಗುಣುವೊ. ಉದಿ ಹೆಚ್ಚೋದು.

ಬಂಡ ತಗೊಂಡೋದೋರು ಕಂಬಳಿಕೊಡೋರು. ಇಂಗೆಯಾ ನಡ್ದು ಬಂದಿತ್ತು ಅಜ್ಜಮುತ್ರು ಕಾಲ್ದಿಂದವಾ. ಪಾಪ ಅವ್ರುಗೇನು ಲಾಸಾತೋ ಏನೋ ಈಗೀಗ ಬರೋದೆ ಕೈ ಬಿಟ್ರು. ಹಿಸ ಬೀದಿ ಕುರುಬುರು ಕೇರಿ ಒಳಿಗೆ ಕಂಬಳಿ ನೇಯರೇ ಕಮ್ಮಿ ಆಗೆವುರೆ. ಬಂಡ ಕೇಳೋರೂ ಇಲ್ಲ ಚರ್ಮಕೊಳ್ಳೋರೂವೆಯೂ ಇಲ್ಲ. ಸಾವುರಾರೂಪಾಯಿ ಬಂಡ ಚರ್ಮ ಬಿಸಾಡ್ತೀವಿ. ನಾಯಿ ಎಳ್ದಾಡ್ಕಂಡು ತಿನ್ನಂಗಾಗೈತೆ ನಮ್ಮು ಬದುಕುವಾ. ಕುರಿ ಬಂಡ ತೆಗಿಯೋರಿಗೆ ಕೂಲಿ ಕೊಡ್ತೀವಿ. ಅವ್ರು ಬಂಡ ಬ್ಯಾಡವೇ ಬ್ಯಾಡ ಅಂತಾವುರೆ. ಮಾಂಸಕ್ಕೆ ಒಳ್ಳೆ ಧಾರಣೆ ಬಂದೈತೆ. ಕುರಿ ಮೇಸೊಕೆ ಜಾಗಿಲ್ಲ. ಅದ್ಯಾವ್ದೊ ಜಿಲ್ಲೆಗೆ ಕುಡಿಯೊ ನೀರಿಗೆ ಹೊಳೆ ನೀರು ಹರುಸ್ತೀವಿ ಅಂತವಾ ಸರ್ಕಾರದೋರು ಹೊಲ್ಕ ಅಳತೆ ಕಲ್ಲಾಕವುರೆ. ಇದ್ದ ಇಟೊ ಒಟೊ ಅಂಗೈ ಗುಣಿ ಅಗಲ ಅನ್ನು ಹೊಲವೂ ಹೊಳೆ ತೆಗಿಯೋಕೆ ಹೋಗುತ್ತೆ. ವರ್ಸೊಂಭತ್ಕಾಲುವೂ ಕಣ್ಮುಂದೆಯಾ ಹೊಲಿರೋದು. ಮಳಿಗಾಲ ನೆಡದರೆ ಕಾರದ ಬಾಯಿಗೆ ಈಸು ಕಾಳಾಗವು. ಕುರಿ ಅಡ್ಡಾಡ್ಸಕೆ ಜಾಗಿಲ್ಲ. ಅಂಗೈಯ್ಯಗಲ ಹೊಲವೂ ಕೈ ಬಿಟ್ಟೋಗುತ್ತೆ. ಕಸುಬುಗುಳು ಕೈ ಬಟ್ಟವೆ ಶಂಕರಯ್ಯ. ದಾಸಪ್ಪನು ಮನಿಗೆ ಇನ್ನೊಬ್ಬ ದಾಸಪ್ಪ ಬಂದರೆ ನಿಂದಾಸಪ್ಪ ನನ್ದು ಹೊದಿಯಪ್ಪಾ ಅನ್ನಂಗಾಗೈತೆ ಅಂತಂತಲೇಯಾ ಬೆಟ್ಟಾಡಿ ನೆಲ ಬರಿತಾ ಮಾತಾಡ್ತಲೇ ಇದ್ದ ಬಸವಯ್ಯ.

ಗಾಳಿ ಬೀಸೊ ಮಖ ಅತ್ಲಿಂದವಾ ಹೊಸಕಟ್ಟೆ ಏರಿ ಹಿಂದೆ ಜನ ಕೂಗಾಡ್ತಿರೊಂಗೆ ಕೇಳುಸ್ತು ಇಬ್ರೀಗೂವೆ. ಯಾರಿರಬಹುದು ಎಂದು ಬಸವಯ್ಯ ಅಂದಾಜು ಮಾಡ್ಕೊಂಡು, ತಾನೇ ಆ ಕಡೆ ಮಖ್ದಾಗೆ ಕುರಿ ಮುಂದಿದ್ದ ಮೊಮ್ಮಗ ವಾಸು ಕಡೆ ನೋಡಿ, ವಾಸಾ ವಾಸಾ ಯಾರು ಜಗಳಾಡಂಗೆ ಕೇಳುತ್ತೆ ಮುಂಗಾರೊಲುಕ್ಕೆ ಕುರಿ ಹೋದ್ವಾ ಎಂದು ಬಸವಯ್ಯ ಮೊಮ್ಮಗನ ಕಡೆ ಮನಸಾದ. ಒಟೊಂದೊತ್ತು ಮಾತಾಡಿದ್ದ ಕುಲುಮೆ ಶಂಕರಯ್ಯ ಊರು ಕಡೆ ಹೋಗಲು ಅವುನೂವೆ ಕೂತುತಾವ್ಲುಲಿಂದವಾ ಎದ್ದೇಳೊಕೋದ. ಆ ಕಡಿಯಿಂದ ವಾಸು ತಾತುನ್ನ ಕೂಗಿ ಸಿದ್ದನಂಜಯ್ಯ ಯಾರ ಜೊತೆಗೊ ಜಗಳಕಾಯುತ್ತೆ. ಜನವುರೆ ತಾತ. ಅದ್ಯಾರೊವಾ ಜೀಪಾಕೆಂಡು ಬಂದವುರೆ ಐದಾರು ಜೀಪಿನೋರು. ಅವ್ರು ಕೂಟೆ ಸಿದ್ದನಂಜಯ್ಯ ಒಂದೆಯಾ ಜಗಳಕ್ಕೆ ಬಿದೈತೆ ಎಂತವಾ ವಾಸು ಕೂಗೇಳಿದ್ದು ಬಸವಯ್ಯನಿಗೆ ಅರುವಾತು. ಇಂತದೇ ಇರಬೇಕು ಅಂತಂದು ಅರ್ಥವಾದಂತಿತ್ತು ಅವುನಿಗೆ. ಅಲ್ಲಿ ಯಾವ ಮಾತಿಗೆ ಜಗಳಾಗುತ್ತೆ ಎಂದು ಬಸವಯ್ಯ ಗೊತ್ಮಾಡಿಕೊಂಡ.

ಸರ್ಕಾರದೋರು ಬೋಕ್ಯಾಳ್ರು ಶಂಕರಯ್ಯ. ರೈತರು ಕಡೆಯಿಂದ ಭೂಮಿ ಕಿತ್ಕಳಾಕೆ ಬಂದವುರೆ. ಸಿದ್ದನಂಜಯ್ಯನ ತಾತುನು ಕಾಲುದ್ದು ಆಸ್ತಿ ಅದು. ಹೊಳೆತೆಗಿಯೋಕೆ ಭೂಮಿ ಅಳ್ತಿಗೆ ಬಂದವುರೆ ಸರ್ವೇರು. ಅದೆಯಾ ಅಲ್ಲಿ ನೆಡಿಯೊ ಗಲಾಟೆ. ಸಿದ್ದನಂಜಯ್ಯಂದು ಅವ್ರು ಜೊತೆಗೆ ದಿನಬೆಳಗಾದ್ರೆ ಬಡುದಾಟ. ಅವುನಿಲ್ದಾಗ ಸರ್ವೇರು ಬಂದು ಅಳತೆ ಕಲ್ಲು ನಡುತಾರೆ ಸಿದ್ದನಂಜಯ್ಯ ನಟ್ಟ ಕಲ್ಲು ಕಿತ್ತಾಕ್ತಲೇ ಅವುನೆ. ಭೂಮಿ ಬಿಡಕಾಗಲ್ಲ ಕೋರ್ಟಿಗೆ ಹೋಗತೀನಿ ಅಲ್ಲಿಗುಮುಂಟವಾ ಸರ್ವೆ ಆಗ ಕೂಡ್ದು. ಲೋಟೀಸ್ ನೀಡ್ದೆ ನೀವೆಂಗೆ ಹೊಲುಕ್ಕೆ ಬಂದ್ರಿ, ಬರಬಾರದು; ಅಂತವಾ ಈ ಬಾರಕಾಲೆಲ್ಲಾವ ಸಿದ್ದನಂಜಯ್ಯ ಗುತ್ತಿಗೆ ಕಂಪಿನಿಯೋರಿಗೆ ತಂಟೆ ಮಾಡೆವುನೆ. ಗುತ್ತಿಗೆದಾರು ಕಡೆಯಿಂದ ದುಡ್ಡು ತಿಂದು ಇಂಜಿನಿಯರ್ ಮೂರ್ತಯ್ಯಾ ಅಂತವಾ ಅವುನು ಆಗಾಗ ಸರ್ವೇರು ಷಡಯ್ಯನು ಜೊತೆಯಲ್ಲಿ ಬರುತಾನೆ ಭೂಮಿ ಅಳಸೋಕೆ. ಜಮೀನು ಕೊಡೊಕೆ ಒಪ್ಪುದೋರು ಗುತ್ತಗೆದಾರು, ಸರ್ವೇರು ಇಂಜಿನಿಯರ್ ಗಳುನ್ನಾ ಹೊಲಕ್ಕು ನುಗ್ಗೋ ಕಳ್ಗುರಿ ಓಡ್ಸೋ ತರವಾಗಿ ಅವುರುನ್ನ ಓಡುಸ್ತಾರೆ‌. ಕಣ್ಣಿಲ್ದ ಸರ್ಕಾರ, ನೋಡಲ್ಲ ಕೇಳಲ್ಲ ಮುಂದಾಗಿ ಹೇಳಲ್ಲ. ನಮ್ದೂವೆ ಅದೇ ಪಾಡು. ಲೋಟೀಸ್ ನೂವೆ ಕೊಟ್ಟಿಲ್ಲ. ಇಷ್ಟು ಕೊಡುತೀವಿ ಅಂತಲೂ ಹೇಳ್ತಿಲ್ಲ. ಸರ್ಕಾರದೋರು ಎಷ್ಟು ಕೊಟ್ಟರೇನು? ಭೂಮಿ ಸಿಗಬೇಕಲ್ಲ? ಮರಮಂಡಿ ಲೆಕ್ಕ ಮಾಡಿಲ್ಲ. ನಮ್ದು ಎಷ್ಟು ಭೂಮಿ ಹೋಗುತ್ತೆ ಅಂತವಾ ನಮ್ಗೇ ಗೊತ್ತಿಲ್ಲ. ದರ್ಕಾಸಲ್ಲಿ ಹಿಡ್ದು ಜಮೀನು, ಪಿತ್ರಾರ್ಜಿತವಾಗಿ ಬಂದ ಆಸ್ತಿಗಳು, ಗೋಮಾಳ್ದ ಜಾಗದಲ್ಲಿ ಹೊಳೆ ತೆಗಿತವುರೆ. ಕುರಿ ಅಡ್ಡಾಡದೆಲ್ಲಿ. ದನಕರ ಮೇವಾಡದೆಲ್ಲಿ. ಇನ್ನ ಮುಂದೆ ದನಕುರಿ ಕಟ್ಕಂಡು ಬಾಳಕಾಗಲ್ಲ ಬಿಡು, ಮತ್ತೆ. ಭೂಮಿ ಕಳಕಣೋರು ಪಾಡು ಹೇಳತೀರುದು ಎನ್ನುತ್ತಲೇ ಶಂಕರಯ್ಯನ ಕೂಡವಾ ಬಸವಯ್ಯನೂವೆ ಎದ್ದು ಸಿದ್ದನಂಜಯ್ಯನ ಹೊಲ್ದ ಕಡೆ ಮುಖ ಮಾಡ್ದ. ಇವ್ರು ಮಾತ ಆಲುಸ್ತಲೇ ಕುಳುತಿದ್ದ ಸಣ್ಣಕ್ಕ ಎದ್ದು ಇಳಿ ಹತ್ತಾತು ಅಂತವಾ ಎದುರುಗಡೆ ಕೆಳಗುಲು ಪಟ್ಟೆಯೊಳಿಗೆ ಸೊಪ್ಪು ಕೊಯ್ಯನಾಂತ ಕೆಳನೆಲುಕ್ಕೆ ಇಳ್ಕಂಡ್ಳು.

ಯಾ ನಮ್ಮವ್ಗುಳಾರ ಮುರಕಂಡೋಗುಲಿ ಅಂತವಾ ಕಂಚಾಘಟ್ಟದ ಬಸವಯ್ಯ ಹಲಸಿನ ಮರದ್ಬು ಬಡ್ಗೆ ಮುಳ್ಳು ನೊರಿದೆ ಹಾಗೇ ಬಿಟ್ಟಿದ್ದ. ವರ್ಷಾವರ್ಷಾ ಆ ಮರ ಹಲಸಿನಮುಸುಕು ಬಿಟ್ಟು, ಅವು ಕೆತ್ಗಾಯಿ ಆಗಿ, ಹಲಸಿನ ಹಣ್ಣಾಗೋ ಹೊತ್ಗೆಲ್ಲಾ ಮುಂಗಾರು ಮಳೆ ಉಯ್ಯೋದು. ಭರಣಿ ಮಳಿ ಮುಗುದು, ಅಸ್ವಿನಿ ಮಳಿ ಹುಟ್ಟಿ, ಕುತ್ರಿಕೆ ಮಳಿಗೆಲ್ಲಾ ಆ ಮರದಲ್ಲಿ ಹಲಸಿನ ಕಾಯಿ ಹಣ್ಣಿಗೆ ಬರೋವು. ರೋಹಿಣಿ ಮಳಿ ಹುಟ್ಟಿದಾಗ್ಲೂವೆ ಆ ಮರದಲ್ಲಿ ಹಲಸಿನ ಹಣ್ಣು ಇದ್ದೇ ಇರೋವು. ಅದೆಂತಹ ಹಲಸಿನ ತಳಿ ಮರವೋ ನಾ ಕಾಣೆ ಬಿಡಿ. ಮುಕ್ಸಿರಿ ಮಳಿ ಬಂದು ಆರಿದ್ರಾ ಮಳಿ ಅರ್ದಪಾದೊತ್ತಿಗೆಲ್ಲಾವ ಆ ಮರದ ಹಲಸಿನಣ್ಣು ಅಖೈರಾಗವು. ಆ ಮರದ ಹಲಸಿನ ಕಾಯಿ ಮನುಸ್ರಿಗೆ ಹಲ್ಲಸಿಗ್ದು ಮರಿಯಂಗಾದ್ರೆ, ಅದೇ ಮರದ ಹಲಸಿನ ಹಣ್ಣು ಕರಡಿಗಳಿಗೆ ಗಾವಿನ ಮರಿ ಸಿಕ್ಕಿದಂಗೆ‌ ಉಲ್ಡಾಡಿಸ್ಕಂಡು ತಿಂದಿರೋವು. ಬದಿನಗುಟ್ಟಿರೊದಲ್ವಾ ಹಾದಿ ಹೊಲ್ದ ಬಡ್ಡೇಳ್ದು ಮರ. ಹಲಸಿನು ಮರದು ಬುಡುಕ್ಕೆ ಮುಳ್ಳೆಳುದ್ರೆ ಅದೊಂತರವಾ ಹಾದಿಗೇ ಮಳ್ಳು ಎಳ್ದಂಗಾಗುತ್ತಲ್ಲ ಎಂತವಾ ಬಸವಯ್ಯ ಅಂದ್ಕಂಡಿರಬಹುದು. ಸಂಜಿನಾಗ ಮುಂಜಿನಾಗ ಮ್ಕಳುಮರಿ ಹೋಗಾ ಬರಾ ಹೊಲಾದಿಯಾಗಿತ್ತು ಅದು. ಹಾದಿಯೊಳಿಗೆ ತಿರುಗಾಡೋರು ಮುಳ್ಳು ತುಳಿಯಾನ ಅಯ್ಯೋ ಇವ್ನ ಮನಿಯಾಳಾಗ ಹಲಸಿನು ಮರಕೆ ಮಳ್ಳು ಎಳ್ದು; ತಿರಗಾಡೊ ಹಾದೆಗೂವೆ ಮುಳ್ಳು ಈಡಾಡೆವಲ್ಲ ಅಂದ್ಕಂದು, ಮುಳ್ಳು ಒಕ್ಸಕಂಡೋರ ಮನಸ್ಸು ಕರುಕ್ ಅಂತಂದ್ರೆ ಒಳ್ಳೆದಾಗಲ್ಲ ಅನ್ನೋದು ಅವ್ನು ಮನ್ದಳುಕು. ತಿನ್ನ ಮುಕ್ಕಾ ಅಲ್ವುವೆ ವರ್ಸಕ್ಕೊಂಸ್ಸಲ ಹಣ್ಣು ಬತ್ತಾವೆ ಯಾ ಪುಣಾತ್ಮುರು ಅದ್ರೂವೆ ಮುರಕಂಡೋಗಿ ನಾಕಾರದಿನ ಇಕ್ಕೆಂಡು ತಿಂದ್ಕಳ್ಳೇಳು ಎನ್ನೋದೇ ಆಗಿತ್ತು ಬಸವಯ್ಯನ ಆಸೆ. ನಾವೇನು ನೀರುಯ್ದು ಬೆಳಸಿದ್ದಲ್ಲ. ಅದಾಗೇ ಬದಿನಗುಟ್ಟಿರೋದು. ಯಾರು ಯಾವ ಮರದ ಹಣ್ಣು ತಿಂದು ಬೀಜುವಾ ಉದುರಿಸಿದ್ದೋ? ಯಾವ್ದರಾ ಪ್ರಾಣಿ ಪಕ್ಷಿ ಯಂದ್ಲು ತೊಟ್ಟೋ ಅಥುವಾ ಮನುಸ್ರು ಮನ್ನೇವ್ರು ಹಣ್ಣು ತಿಂದು ಉಗುಳ್ದ ಬೀಜವೊ. ಅಲ್ಲಿ ನೆಲಕ್ಕುದಿರಿರಬಹುದು ಹಲಸಿನ ಬೀಜ. ಅದು ಹುಟ್ಟಸಕಿ ನೀರೊಯ್ದು ಬೆಳಿಸ್ದ ಮರವಂತೂವೆ ಅದಲ್ಲ ಬಿಡಿ. ತುಂಬೊಳ್ಳೆ ತಳಿ ಚಂದ್ರುತೊಳೇದು. ರುಸಿಯಂತೂವೆ ಜೇನು ಬೆಲ್ಲ ಸರಿವ್ಕಂದು ತಿಂದಗಾಗುತ್ತೆ ಅಂದ್ಕಂತ್ತಿದ್ದ ಬಸವಯ್ಯ, ಅದೇ, ಹಲಸಿನ ಮರದು ಪಟ್ಗೆ ಬ್ಯಾಸಾಯ ಹೂಡಾಕ ಬಂದಾಗುಲೆಲ್ಲವಾ.

ಕರಿಕಲ್ಲು ಬಾರೆ ಹೊಲ್ದಮಾಳದಲ್ಲಿ ಕುರಿ ಬಿಟ್ಕಂಡು ದೂರದಲ್ಲಿ ಕಾಣೋ ಅವ್ನ ಹಲಸಿನ ಮರದು ಪಟ್ಟೆನೇ ನಿಟ್ಟಾಕಿದಂತೆ ದಿಟ್ಟಿಸಿ ನೋಡ್ತಾ ಕೂತಿದ್ದ ಬಸವಯ್ಯ. ನದಿ ನೀರು ಹರುಸೋಕೆ ಸರ್ಕಾರದೋರು ಹೊಳೆ ಮಾಡೋಕೆ ಭೂ ಕೇಳಿದ್ರೆ ಮುಂದ್ಲ ವರ್ಷಕ್ಕೆ ಮರವೂ ಹೊಲವೂ ಮಂಗ ಮಾಯವಲ್ಲ ಎಂದು ಬಸವಯ್ಯನ ಮನುಸು ಒಂದೇ ಸಮನೆ ಬೇಯುತ್ತಿತ್ತು. ಹೊಲಾದಿಗುಂಟಾವಾ ಅಲ್ಲಾದೆ ಬಂದ ಕುಲುಮೆ ಶಂಕರಯ್ಯನ್ನ ಕಂಡು, ಎಲ್ಗೋಗಿದ್ದೆ ಶಂಕರಯ್ಯ ಈ ಉದ್ದನ್ನುರಿಬಿಸಿಲ್ನಾಗೆ ಎಂದು ಕರೆದು ಮಾತಾಡ್ತಾವಾ, ಇಬ್ರೂವೆ ಅತ್ತ ಹಳ್ದ ದಿಣ್ಣೆ ಕೆಳಾರದಲ್ಲಿದ್ದ ಅಳಲೆ ಮರದು ತುದಿ ನಳ್ಳಾಗೇ ಕೂತ್ಕಂದ್ರು. ಮಗಳು ಮದಿವೆ ಒದಿಗೇದೆ. ಇರಾದು ಇಲ್ದುದ್ದು ಕೂಡಿಕ್ಕೆಬೇಕು. ಯಾವ್ದು ಇಲ್ದುದ್ರುವೆಯೂ ನಡಿಯಲ್ಲವಲ್ಲ ಬಸವಯ್ಯ. ಇಂಗೆಯಾ ಅಣ್ಣಾಪುರುದಾಗೆ ಕಂಡೋರಿದ್ರು. ಒಂದಿಷ್ಟು ದುಡ್ಡಾ ಸಾಲ ಕೇಳನಾಂತ ಹೋಗಿದ್ದೆ. ಬಿರುನ್ನ ಬರನಾಂದ್ಕಂಡೆ, ಕೂತೆ. ಕಂಡೋರಲ್ವಾ , ಉಂಡೋಗುವಂತೆ ಕೂತ್ಕ ಅಪುರೂಪುಕ್ಕೆ ಬಂದಿಯಾ ಅಂತಂದ್ರು. ಅಂಗೂವೆ ಟೀ ಕುಡ್ದು ಎದ್ದೊಲ್ಟೇ ಬಿಟ್ಟೆ ಅಂತನ್ನು. ರಂಗಧಾಮಣ್ಣ ಇದ್ದುದ್ದು; ಹೇಳಿ ಕಳಿಸ್ದಂಗೆ ಬಂದಿಯಾ, ಇರು ಹೋಗಂತೆ ಹೋಗೋದು ಇದ್ದುದ್ದೆಯಾ ಇನ್ಯಾತ್ರುದಾರಾ ಮಾಮೂಲಿಯಾಗಿದ್ರ ಹೋಗು ಅನ್ತಿದ್ದೆ. ರಾತ್ರಿ ಓತಮರಿ ಬಾಡು ಪಾಲು ತಂದಿದ್ದೆ. ಹಿಟ್ನೆಸ್ರು ಇನ್ನೇನು ಉಕ್ಸಿ ಮುದ್ದೆ ತೊಳುಸ್ತಾರೆ ಇರು ಉಂಡೇ ಹೋಗುವಂತೆ ತೀರಾ ಹೊತ್ತುಂಟವಾ ಅಂತಂದ್ರು. ಅಷ್ಟೊತ್ಗೆಲ್ಲಾವ ಬಿಸುಲು ರೇಗೇ ಬಿಡ್ತು. ಎಂದ ಕುಲುಮೆ ಶಂಕರಯ್ಯ. ಓತ ಮರಿ ಬಾಡು ಒತ್ತಟ್ಟಿಗಿರಲಿ, ದುಡ್ಡಾದುವ ಸಾಲ ಕೊಡ್ತೀವಿ ಅಂದ್ರ, ಕೈ ಎತ್ತಿದ್ರಾ. ಹೋದ ಕೆಲಸ ಆಯ್ತು ತಾನೆಯಾ ಎಂದು ಬಸವಯ್ಯ ಅನ್ಗುಜಿನ್ಗು ಮಾತಲ್ಲೇಯಾ ಉಸ್ರುಸ್ದಿ. ಅಯ್ಯೋ ನಮ್ಮ ಗಾಚಾರುಗುಳುವೆ ನೆಟ್ಗಿರುಬೇಕಲುವಾ, ಇದ್ದಂಗಾಗುತ್ತೆ. ಎಂದು ನೆತ್ತಿ ಮೇಲೆ ಕೈಯೂರಿ ನೆಲ ನೋಡ್ತವಾ ಮಗ್ಗ ನಿಂತೋಗೆವಂತೆ ಧಾರಣೆ ಬಿದ್ದೋಗೆವೆ ಈವಾಗ ಸಾಲ ಕೊಡೊಕೆ ಕೈ ನಡಿಯಲ್ಲಾ ಅಂದ್ರು, ಕಾರ್ಯಯೇನು ನಿಲ್ಲುತ್ತಾ. ಆಗ್ಲೆಯಾ ಮಾತು ಕತಿ ಮುಗುದು ಮನೆಜಯವೂ ಆಯಿತು. ಅನ್ನ ಸೊಪ್ಪಿಗೆ ನೇರೂಪಾಗಿರೊ ಮನಿತನ ಸಿಕ್ಕೈತೆ. ಬಿಡಕಾಗದು, ಅಂತವಾ ಯಣಗಬೇಕಾಗಿದೆ. ಏನ್ಮಾಡದು? ಬಸವಯ್ಯ ತೇಯ್ಕಂದು ಕುಡಿಯನಾಂದ್ರೆ ಮನಿ ಒಳ್ಗೆ ಒಂದಾಣಿಲ್ಲ. ಮುಡುಪು ಕಟ್ಟೋಕು ಮೂರಾಣಿ ಇಲ್ದಂಗಾಗೈತೆ, ದೇವ್ರಿಟ್ಟಂಗಾಗುತ್ತೆ ಅಲ್ವಾ? ಮದುವೆ ಮಾಡಿಕೊಡಾಕೊಪ್ಪೀನಿ, ಅಂದು ಊರು ಕಡೆಗೆ ಮಖ ತಿರಿಗಿಸ್ದ ಕುಲುಮೆ ಶಂಕರಯ್ಯ. ಕೂತ್ಕಳಯ್ಯ ಹೋಗುವಂತೆ. ಈ ರಣಬಿಸಲೊಳಗೆ ಹೋಗಿ ಇನ್ನೇನು ಮಾಡಿಯಾ. ಗ್ಯಾರಘಟ್ಟ ತಲುಪೊದು ಎಷ್ಟೊತ್ತಾದಾತು ಇಳಿ ಹೊತ್ತಿಗೆ ಹೋದ್ರಾತು ಅಂತಂದ ಬಸವಯ್ಯ ಮಾತಿಗೆ ಶಂಕರಯ್ಯನೂವೆ ತಡಾಕೊಂಡ. ಅಷ್ಟೊತ್ತಿಗೆ ಆಗಲೇ ಒಪ್ಪೊತ್ತಾಗಿತ್ತು. ಕುರಿ ಕರಿಕಲ್ಲು ಹೊಲ್ದ ಬಾರೆ ವಾಲು ಡೊಡ್ಡೇಣುಗುಂಟಾವ ಅಲ್ಡಿಕಂಡು ಮೆಲಕಾಡಿ ಮೇಯತೊಡಗಿದ್ದವು. ಬಿಸಿಲು ರವುಸಿಗೆ ಬಾಯಾರಿ ಏನು ಹಸ್ರು ಮೇದ್ರೂವೆಯೂ; ಅವೂವೆ, ನೀರಿಗೆ ರಾಪಾಡವು. ವಾರದುತಟಿಗೂ ಹೊಸ ನೀರು ಕುಡ್ದು ಒಂದೊಂದು ಕೆಮ್ಮವು. ಕೆಲುವು ದಮ್ಮುಕಟ್ಟಿ ಸೀನವು. ಇನ್ನ ಕೆಲುವೊ, ಒಂದಕ್ಕೊಂದು ಉಂಡುಸುತ್ಕಂದು ಬಿಸುಲು ತಡಿಲಾರದೆ ಬಾಯಾರಿ ಅವು ಒಂದಕ್ಕೆ ಇನ್ನೊಂದು ಸುತ್ತಾಕ್ಕೊಂಡು ಸುತ್ತಾಕ್ಕೊಂಡು ಬೇಲಿ ನೆಳ್ಳು, ಮರದ ಹಡಿಯಾ ತಿರಗಾಡಿ ತಗ್ಗಿಗೆ ಇಳಿತಿದ್ದುವು ಅವಾಗಲೇಯಾ ನೀರಿಗೆ. ಬಸವಯ್ಯ ಮುಂದೆ ಎಂತೆಂತವು ಬತ್ತಾವೊ ಅಂಗಭಂಗ ಆಗ ಆಗ್ತಾವೆ ಅಂತಂದು ಆ ವರ್ಸದು ಪಟ್ಲಿಮರಿಗುಳ್ನ ಅನಿನ್ನೂವೆ ಮಾರಿರುಲಿಲ್ಲ. ಅವುಗಳ ಬೀಜವಾ, ಕಶಿನೂ ಮಾಡ್ದೆ; ಹಾಗೆ ಉದಿ ಒಳ್ಗೆ ಇಟ್ಕಂಡಿದ್ದ. ಅವೆಲವಾ ಮೀರಿದು ಟಗುರಾಗಿದ್ದುವು ಕುರಿ ಒಳಗೆ. ಪರಮಗುರಿಗಳ್ನ ಅವು ಮೇವುವಾಡಲೂ ಬಿಡೊವಲ್ಲಾ. ಒಡಾಸ್ಸಿ ಇಕ್ಕೋವು ಕುರಿಕಟ್ಟೋದೆ ಅವ್ಕೊಂದು ಸಿರಿ. ಪರಮುಮರಿಗಳ ಬಾಲ ಮೂಸ್ತಾವಾ ತಿರಗಾಡ್ಸಾವು. ಪರಮುಗುಳು ಅವುಕೂವೆ ಬೇಕಾಗಿದ್ರೂವೆ ತಪ್ಪಿಸ್ಕಳಂಗಾಡಿ ಕಟ್ಟೋಕೆ ಬಂದ ಟಗರುಗುಳಾ ಓಡಾಡ್ಸಿ ಓಡಾಡ್ಸಿ ಓಟೊಂದೂರ ಓಟೊಂದೂರ ಓಟಕಿತ್ತವ್ರುಂಗೆ ನುಸ್ಕಂಡು ನುಸ್ಕಂಡು ಓಡೋಗವು ಅಲ್ಎದಲ್ಲೆಯಾ ಹಿಂಡಿನು ಕುರಿಯೊಳಗೆ ಕಣ್ಮರಿಯಾಗೋವು.
ಆಗಲೇ ಮುಂಗಾರು ಮಳೆ ಚನ್ನಾಗಿ ಹನಿಯೊಡ್ದು ನೆಲ ತನುವಾಗಿ ದನಕರಿಗೆ ಹೊಸ ಮೇವಾಗಿತ್ತು. ಕರಿಕಲ್ಲು ಬಾರೆ ಹೊಲ್ದ ಬೀಳು, ಬದುಗುಳು, ತಗ್ಗಿನು ಜಾಗುಗಳೆಲ್ಲಾವ, ಗುತ್ತಿ ತಾವೆಲ್ಲಾ ಹುಲ್ಲು ಕಡ್ಡಿ ಚಿಗುತು ಹಲ್ಲಿಗೆ ಚುಚ್ಚೊಂಗಾಗಿ ಕುಡಿ ಮೇಲೆಸಳಿಕ್ಕಿತ್ತು. ಗಂಧ್ಗರಿಕೆ ದಿಂಡು ಗೆಣ್ಣಿಕ್ಕಿ ಎತ್ತೆತ್ತಲೊ ಗಂಬ ತಿರುಗಿ ಸುತ್ಲುವಾ ಬಳ್ಳೆರಿದು ಕುರಿಬಾಯಿಗೆ ಸಿಕ್ಕೋವಷ್ಟಾಗಿತ್ತು, ಯಲವಾ. ಮುಂಗಾರು ಮಳಿಗೆ ನೆಲಂದು ನೆಲವೆಲ್ಲಾ ಕರಿಕಲ್ಲು ಬಾರೆ ಒಳಿಗೆ ಭೂಮಿ ಹುಲ್ಗರಿದಿತ್ತು. ಮುಂಗಾರು ಮಳೆ ಚನ್ನಾಗಯೇ ಒದಗಿ ಬಂದಿದ್ದರ ಪರಿಣಾಮವಾಗಿ. ಬೀಳೂಲಿ ಮೇವು ಕುರಿ ಮೇದರೆ ಕಾಯಿಲೆ ಬೀಳೋವು. ಆದರೆ ಗಂಧಗರಿಕೆ ಹುಲ್ಲು ಮೇದ್ರಂತೂ ಕುರಿ ಓಳ್ಳೆ ನಡಾಗವು. ಬೆನ್ನುರಿ ದಿಂಡಾಗಿ ನಡಾ ಹಿಡುದ್ರೂ ನಡ ಸಿಕ್ತಂಗೆ ನಡು ಬಲ್ತು ರಾಸಾಗವು. ಮುಂಗಾರು ಮಳಿ ಮೋವು ಬಿಸುಲು ಬೆರೆತು ಇನ್ನೇನು ಅಗಾ ಇಗಾ ಅನ್ನೋ ಹೊತ್ತಿಗೆ ಭೂಮಿಗೆ ಬೀಳೊ ಮಳಿ ಘಮ್ಲುಗೆ, ಟಗರುಗಳಿಗೊ ಒಳಗೊಳಗೇ ಬೆದೆ ಧೂಳೆದ್ದು, ಅವು; ಈವಳ್ಳಿ ಪರಮಗಳ ಮೇಲೆ ಉಗ್ಗಾಡವು. ಅವುಗುಳಿಗೆ ಅದಿರತ್ತಿ ಕುರಿ ಒಳಗೆ ಎದ್ದಾಡವು. ಹೆಣ್ಮರಿ ಪರಮಗಳನ್ನ ಅತ್ತಿತ್ತಾವಾ ಓಡ್ಸಾಡವು. ಪಟ್ಲಿಗಳಿಗೂ ಬೆದಿ ಹೆಚ್ಚಾಗಿ ಅವೂವೆ ಕುರಿ ಅಟ್ಟಾಡಲು ಹೋಗಿ ಹಿರೀಖ ಟಗರುಗಳಿಂದ ದಡಾರನೆ ಗುದ್ದಿಸಿಕೊಂಡು ಬಿದ್ದು ಮೂರುಲ್ಡಾಗಿ ಅತ್ತಾ ಇತ್ಲಾಗಿ ಪಲ್ಟಹೊಡ್ದು ಎದ್ದೊಡೋಗವು ಕುರಿ ಕಟ್ಟಾಕೆ ಹೆಣ್ಣರಾಸುಗಳ ಹಿಂದಿಂದೆಯಾ.

ಹುರಿಯಾ, ಅದರೆತ್ತೋಳು ಯಂಡ್ರನಾಕಾಯ. ಅವೇನು? ಕುರಿಗಳು ಬಾಲ ಮೂಸ್ಕಂದು ಪರಮುಗಳ ಒಡಡ್ಸುತ್ತವಲಾ ಮೇಯಾಕುವೆ ಅವುನ್ನು ಬಿಡುದಂಗೆ. ನನ್ಣೆತಿವೆ, ನಾನು ನಿಮ್ಮುನ್ನ ಬೀಜ್ದಗಿರೋಕೆ ಬಿಟ್ಟುದ್ದೆಯಲ್ಲಾ, ಬೀಜವೊಡ್ದರೆ ನೀವೇ ಸರಿಯಾಗ್ತಿರಾ, ನನ್ನಣ್ತಿ ರಗತ್ಗಾಳ್ನಾವೆ. ಇವತ್ತೈತೆ ನಿಮ್ಮುಗೆ ಕುರಟ್ಟಿತವಾ, ನಡೀರಿ ಎಂದ್ಕಂದು ಬಸವಯ್ಯ ಪರಮಗಳನ್ನು ಅಟ್ಟಾಡಲು ಮುಗಿಬೀಳುತ್ತಿದ್ದ ಪಟ್ಲಿಗಳನ್ನು ಅದ್ಲುಸುತ್ತಾ, ಕುಲುಮೆ ಶಂಕರಯ್ಯನ ಕಡೆ ತಿರುಗಿದ ಮಖ ಒಡ್ಡಿ ಅವನತ್ತವಾ ಕೈ ನೀಡಿ ತಗಳಯ್ಯಾ ಒಂಸಿಗಳು ತರುಕುಲು ಎಲೈತೆ ಅಂಗೆಯಾ ಬಾಯಾಡು ಎಂತಂನ್ನುತ್ತಾ ಸಿಗುಳು ಎಲೆ ಒಂದಪ್ಪು ಅಡಿಕೆನೂವೆ ಕೊಟ್ಟು ಎಲಡಿಕೆ ಚೀಲುಕ್ಕೆ ಕೈಯ್ಯಾಕಿ ಸುಣುಕಾಯಿ ತಡಕಿ ಆಚೀಕೆ ತಗುದು ಶಂಕರಯ್ಯನ ಕೈಯ್ಯಾಗುಳ ಸಿಗುಳು ತರುಕುಲೆಲಿ ಬೆನ್ನಿಗೆ ಈಟು ಸುಣ್ಣ ನೊರುದ. ಸುಣ್ಣ ನೊರಕಂಡ ಒಣಗಿದ ಇಳ್ಳೇದೆಲಿನೂವೆ ಅಪ್ಪು ಅಡಿಕೆ ತುಂಡುನೂವೆ ಮುದುರಿ ಉಂಡ್ಮಾಡ್ಕಂಡು ಡವ್ಡುಡಿಗೆ ಒತ್ಲುಸಿಕೊಂಡ ಕುಲುಮೆ ಶಂಕ್ರಯ್ಯ, ಯಂಗವಾ ಕಣ್ಮುಂದೆ ನಾಕಾರು ರಾಸು ಕುರಿ ಇರೋತ್ತಿಗೆ ನೀನೇನೊವಾ ಜಟನ್ನಾದೆ ಕಣೊ ಬಸವಣ್ಣಾ, ನಮ್ಮ ಪಾಡು ಸಿವುನಿಗೆ ಮುಟೈತೆ ಅದ್ಕಂತವಾ ಎಲಡಿಕೆ ರಸವಾ ಬಾಯೊಳಗಿಂದ ಅಲ್ಲೆಯಾ ಅತ್ಲು ಕಡಿಕೆ ವಾರಾಗಿ ತುಪುಕ್ಕನೆ ಉಗ್ದ. ಬಿಸಿಲ ಹವೆ ತಡಿಲಾರದೆ ಮುದಿ ಕುರಿಗಳು ಮೇಯಕೂ ಆಗದೆ ಗೊಣ್ಣೆ ಸುರುಸ್ತಾವ ನಲುಕ್ಕೆ ಮುಸುಣಿ ಊರಿ ನಿಂತೇ ಇರೋವು. ಗೊರವಂಕದ ಹಕ್ಕಿಗಳು ಹಾರಿ ಬಂದು ಆ ಗೊಣ್ಣೆ ಕುರಿಗಳ ಮೂಗಿನ ಸೆಂಬೆ ಮೂಸು ನೋಡಿ ಮತ್ತೆ ಪುರ್ರಂತವಾ ಎತ್ತೆತ್ತಲೋ ಹಾರಾಡುತ್ತಿದ್ದುವು. ಉಣ್ಣೆಗೊರುವ ಹಕ್ಕಿಗಳು ಹಾರಿ ಕುರಿ ಮೇಲೆ ಕುಳ್ತು ಸವಾರಿನೂವೆ ಮಾಡೋವು.

ಒಕ್ಕುಲುತನ ಹಿಂದೆ ನಡುದಂಗೆ ನಡಿತಿಲ್ಲಾ. ಕುಲುಮೆ ಇಕ್ಕೋದೆ ಅಪುರೂಪುಕ್ಕೆ ಆಗೇದೆ. ಕುಲುಮೆ ಇಕ್ಕಿರೂವೆ ಜನುವೇ ಬರಲ್ಲ. ಆವಗೆಲ್ಲಾವಾ ಮುಂಗಾರು ಮಳಿ ಹನಿಯಾದನ್ನೇ ಕಾದು ಜನ ಕುಲುಮೆ ಮನಿತವಾ ಬರೋರು. ಅವರ ಅವುಸ್ರುಕ್ಕೆ ನಾವು ಕುಲುಮೆ ಇಕ್ಕಬೇಕಾಗಿತ್ತು. ಬ್ಅಸಾಯ್ದದೋರು ಬಯ್ಯೋರು ಕುಲುಮೆ ಇಕ್ಕೋದು ನಾಕ್ದಿನ ತಡುವಾದ್ರೆ. ಕುಲುಮೆ ಶಂಕ್ರಯ್ಯನಿಗೆ ಇಸಲ್ದವು ಆಯ್ದ ಕಾಳು ಹೆಚ್ಚಾದು ಅಂತವಾ ಕಾಣುತ್ತೆ. ಈ ವರ್ಸ ಕಣುತ್ತಾವು ಬರುಲಿ ಐತೆ ಶಂಕರಯ್ಗೆ. ಮುಂಗಾರು ಮಳಿ ಒದುಗಿ ಅಸ್ವಿನಿ ಮಳಿ ಮುಗುದ್ರುವೆ ಕುಲುಮೆ ಇಕ್ಕದಿದ್ರೆ ನಾವು ಎತ್ತೋಗದು ಅನ್ನೋರು.

ಹೊಸ ಮಳಿಯಾದ್ರೆ ಕುಲುಮೆ ಮನಿ ಮಂದೆ ಜನ ಜಿನಗದು. ಅತ್ಲಾರು ಇತ್ಲಾರು ಬರುತ್ತಲೇ ಇರೋರು. ಅವ್ರುನ್ನ ಸಂತ್ಲಿಕ್ಕಿ ಸಾಗಾಕದೇ ಆಗೋದು ನನಿಗೆ ಬಿಡುವಿಲ್ದ ಕೆಲಸ. ನೇಗ್ಲು ಎದಿ ಮೇಲೆ ಬಡಿಯೋ ಜಿಗುಣಿಯಿಂದ ಹಿಡುದು ಹಿಟ್ನು ಸ್ವಾರೆ ತಳಕೆರಿಯೋ ಕೆರಿಯೋಲೆವರುವಿಗೂವೆ ಅದು ಇದು ಅಂತಾವಾ ಬ್ಯಾಸಾಯ್ದೋರು ಕುಲುಮೆ ಮನಿ ಹುಡಿಕೊಂಡು ಬರೋರು ಅಂತೀನಿ.

ಭರುಣಿ ಮಳಿಗೆ ಭೂಮಿ ಬೀಜ ಕಾಣೋಕು ಮೊದುಲೇಯಾ ಕುಳ, ತಾಳು, ಕುಡ್ಲು ಸಾಗೊಯ್ಯೋದು ಅವುಗುಳು ತೊಟ್ಟು ತುದಿ ಮಾಡೋದು ಕುಲುಮೆ ಕೆಲ್ಸಗುಳು ಒಂದರಿಂದೆ ಇನ್ನೊಂದು ತಡಾಯ ಬರೋವು. ಈಗೆಲ್ಲವಾ ಟ್ರಾಕ್ಟರ್ ಬ್ಯಾಸಾಯ ಬಂದುವು, ಬಸವಣ್ಣ. ಬ್ಯಾಸಾಯವೇ ಮಿಸಿನ್ ಮ್ಯಾಲಿ ನಡಿಯಂಗಾತು. ಕೊಯ್ಲು ಮಂತಾಗಿವೆಯೂ ಮಿಸಿನ್ನುಗುಳೇ ಮಾಡ್ತಾವೆ. ಬಾಯಾಗ್ಳ ತೊಂಬ್ಲವಾ ದವುಡೆ ಸಂದಾಗೇ ಲೊಡುವಾಡುತಾ ಶಂಕರಯ್ಯ ಹಿಂದಿನ ಕುಲುಮೆ ಬದುಕ ಅಂಗ್ಲಾಪಿಸ್ಕಂಡ. ಕುರಿ ಯತ್ತೋದುವೊ ಅಂತವಾ ಬಸವಯ್ಯ ಕರಿಕಲ್ಲು ಬಾರೆ ಬಡಗಲಾಗಿ ತಿರಿಕಂಡ ಕೂತುತ್ತಾವ್ಲುಲಿಂದಲೇ.

ದೂರದಾಗೆ ಯಾರೋವಾ ತಲಿ ಮ್ಯಾಲೆ ಏನೋವಾ ಹೊತ್ಕಂಡು ಕಂಕುಳುದೊಳಿಗೆ ಎಡ ರೊಂಡಿ ಮ್ಯಾಲೆ ಅದೆನೋ ಇರಿಕಂಡು ಹಲಸಿನ ಮರದ ಹೊಲಾದೆಗೇ ಬರೋದು ಶಂಕರಯ್ಯಗೆ ಮಂಜಮಂಜಾಗಿ ಕಂಡಂಗಾತು. ಹಣಿ ಮೇಲೆ ಅಂಗೈ ಅಡ್ಲಾಗಿ ಹಿಡ್ದು ಅಂಗೇ ನೋಡ್ದ. ಬರೋಳು ಹೆಂಗಸ್ಸೆಯಾ ಅಂತವಾ ಮನುದಟ್ಟಾತು ಅಂದ್ಕಳಿ. ಬಸವಯ್ಯನೂವೆ ಅತ್ತಲಿಂದ ಬರೋಳು ನಮ್ಮನೇಳೆ ಇರುಬೇಕು ಅಂದ್ಕಂಡ. ಹತ್ರಹತ್ರ ಆದಂಗೆ ಬತ್ತಿದ್ದೋಳು ಶಂಕರಯ್ಯನ ಹೆಣತಿ ಸಣ್ಣಕ್ಕ. ತಲಿ ಮ್ಯಾಲೆ ಸಗಣಿ ತಟ್ಟಿ ಹೊತ್ಕಂಡು, ಎಡ ರೊಂಡಿ ಕಂಕುಳ್ದ ಒಳಿಗೆ ನೀರು ಕುಂಬವಾ ಇರಿಕಂಡು ಸಣ್ಣಕ್ಕ ಕರಿಕಲ್ಲು ಬಾರೆ ಬಡುಗುಲು ಅಡ್ಡೇಣು ಇಳಿತಿದ್ಲು.

ಎದ್ದ ಆಕಡಿಯಾ ಹೋಗಿ ಬರೋಳು ಸಣ್ಣೆಯಾ ಅದ್ಕಂಡು ಅಲ್ಲೇ ವಾರಾಚೆಗಿದ್ದ ಬಂದ್ರೆ ಗಿಡ್ದು ಮಗ್ಗಲಿಗೆ ವಾರಾಗಿ ಕುಂತು ವಂದಾ ಮಾಡಿ ಎಲಡಿಕೆ ಉಗ್ದು ಮತ್ತೆ ಶಂಕ್ರಯ್ಯನತ್ರವಾ ಬರೋಕೆ ಮೇಲೆದ್ದ ಬಸವಯ್ಯ. ಇವ್ನು ಒಂದಾ ಮಾಡ್ದ ವಾಸ್ನೆಗೆ ಅವೆಲ್ಲಿದ್ದವೊ ಅನ್ನಂಗೆ ಬಂದ್ರೆ ಗಿಡ್ದ ಬಡ್ಡೆಗುಂಟವಾ ಕಟ್ರೆ ಗೇಣಿಕ್ಕಿ ಹರುದು ಬಂದುವು. ಸಾಲಿಕ್ಕಿ ಬಂದ ಅವು ಬಸವಯ್ಯನು ಹೆಜ್ಜಿಗೆಲ್ಲಾವ ಮುಸ್ರಿದುವು. ಬುದೂರನೆ ಎದ್ದ ಅವ್ನು ಕಾಲು ಕೊಡುವುತಾ ಬಂದು ನೀನು ಸಿಕ್ಕಿ ಏಸೊಂದು ದಿನಾದುವು ಶಂಕರಯ್ಯ. ಹೋದ ಸಿವುರಾತ್ರಿ ಹಬ್ಬ ಸಂತೆ ದಿನ ಚಿಕ್ಕನಾಯಕನಹಳ್ಳಿ ಸಂತೆಹೊರೇಲಿ ಸಿಕ್ಕಿದೋನು ನೀನು ಅಸಾಮಿ. ಆದರಾಚಿಕೆ ನಮ್ಮಿಬ್ರುಗೂವೆ ಮಖ ಭೇಟಿ ಆಗಲೇ ಇಲ್ಲುವಲ್ಲಾ ಶಂಕರಯ್ಯ. ಅಪುರೂಪುಕ್ಕೆ ಸಿಕ್ಕಿಯಾ ಕೂತ್ಕಳನ ಇರು ನಮ್ಮ ಸಣ್ಣಿ ಬತ್ತಾವುಳೆ. ಇನ್ನೊಂದು ಸಲಕ್ಕೆ ಎಲಡಿಕೆ ಆಕೆಳುವಂತೆ ಎಂದು ಶಂಕರಯ್ಯ ಮತ್ತೂ ಎದ್ದೊಲ್ಟೋನ್ನ ಬಸವಯ್ಯ ಅಲ್ಲೇ ಕೂರಿಸ್ಕಂಡ. ಅಜ್ಜ ಬಸವಯ್ಯನು ನೆರಿವಿಗೆ ಕುರಿಯಿಂದೆ ಬಂದಿದ್ದ ಮೊಮ್ಮಗ ವಾಸು ಅಲ್ಲೇ ಹೊಲ್ದ ತಲಿನಾಗೆ ಕುರಿ ಮುಂಗಾರೊಲ ಅಡ್ಡಾಯದ ಹಾಗೆ ನಿಗುವಾಗಿ ನಿಂತು ಅದೆಂತವೊ ಅವುನಿಗು ತಿಳ್ದವು ಓಸು ಪದವ ಸಿಳ್ಳಾಕಿ ನುಡುಸ್ತಿದ್ದ. ವಾಸುಗೂ ಒಪ್ಪತ್ತೊನೊತ್ತಿಗೆ ಹೊತ್ತಿನಂತೆ ಹೊಟ್ಟೆಸ್ತಂಗಾಗಿ ಏನಾದ್ರೂ ಕುರುಕುಲು ಬೇಕನ್ಸಿ ಹತ್ರುದಲ್ಲೇ ಕಾಣುತಿದ್ದ ಹಣ್ಣೀಸಲು ಮರಕ್ಕೆ ಒಮ್ಮೊಮ್ಮೆ ಕಲ್ಲು ತೂರನು ವಾಸು. ಅವುನು ಎಸ್ದ ಕಲ್ಲು ಒಂದೊಂದು ಈಸ್ಲಣ್ಣಿನು ಗೊನಿಗೆ ಬಡ್ದು ಒಂದೊ ಎರಡೋ ಈಸ್ಲು ಕೆಂಗು ಉದರೋವು. ಅವುನ್ನೇಯಾ ಅವುನು ಅಗೊಂದು ಇಂಗೊಂದು ಬಾಯಾಡೊನು. ಕುರಿಕೋಲಾಕಿ ಗಿಡಗೆಂಟೆ ತಡ್ಕೋನು. ಬೆಳುವುನೊ ಗೌಜುನೋ ಮೊಟ್ಟೆ ಇಲ್ಲೆಲ್ಲಾದ್ರೂವೆ ಇಕ್ಕೆವೇನೋ ಅಂತವಾ ಬಡ ಬುಡ ಅದ್ಬಿಟ್ಟು ಇದ ಇದ್ಬಿಟ್ಟ ಅದ ಗಡ ಗಿಡವಾ ತಡಕೋನು ಜೊತೆಗೆ ಕುರಿನೂ ನಿಗಾವಾ ಮಾಡೋನು.

ಸಣ್ಣಕ್ಕ ಹಲಸಿನ ಮರದ ಪಟ್ಟೆಗಾದು ಮಟ್ದಗುಂಡಿ ಬದಿನುಗುಂಟವಾ ಅಲ್ಲೇ ಹಾಳೊಳಿಕೆ ಇಳ್ದು ಹಿಪ್ಪೆಮರದ ಹಡಿಲಾದು ಅತ್ತ ಕೆಂಗಾಡು ಪಟ್ಗಿಗೋಗ ಒಳ್ಳಣಿ ಮೂಗುತ್ತುದು ತುದಿ ಮಗ್ಗಲಾಗೇಯಾ ತಡಾಯ್ದು ಕೊಪ್ಪಲು ಪಟ್ಟೆ ಬೇಲಿ ಒಬ್ಬಗೇ ಇವ್ರಿಬ್ಬುರುವೆ ಕುಂತು ಮಾತಾಡತಕೇ ಹಳ್ದದಿಣ್ಣೆ ಕೆಳ್ನೆಲದಗಿದ್ದ ಅಳಲೆ ಮರದ ಹತ್ರುಕೇ ಅವುಳೂವೆ ಸಣ್ಣಕ್ಕ ಬಂದ್ಳು. ಕಂಕುಳುದೊಳುಗುಲು ನೀರು ಕುಂಬವಾ ಸೊಂಟ್ದ ಮ್ಯಾಗ್ಲಿಂದವಾ ಅತ್ಲಾಗಿ ನೆಲ್ಕಿಳಿವಿ, ಅಂಗೆಯಾ ಒಂದ್ಕಡಿಕೆ ಒನ್ಕಂಡು ಬಸವಯ್ಯ ಕಡೆಗೇ ಅವುಳೂವೆ ಕೈಯ್ಯಾರವಾದ್ಲು. ಸಣ್ಣಕ್ಕಾ, ಚನ್ನಾಗಿದಿಯಾ; ಅಂದು ಕುಲುಮೆ ಶಂಕರಯ್ಯ ಅವಳತ್ತವಾ ತಿರಿಕಂಡ. ಬಸವಯ್ಯ ಅಲ್ಲೆ ಅಳಲೆ ಮರದು ಬುಡ್ದಿಂದ ಕೈ ಅಳ್ತತ್ಗೇ ಸಿಕ್ಕ ಮುತುಗ್ದು ಎಲೆ ಕೊಯ್ಕಂದು ದೊನ್ನೆ ಮಾಡಿ ಕುಂಬದೊಗ್ಳ ನೀರು ದೊನ್ನಿಗೆ ಬಗ್ಗಿಸ್ಕಂಡು ಕುಡಿತಿಯಾ ಶಂಕರಯ್ಯ ಅಂತವಾ ನೀರುದಿನ್ನೆಯಾ ಅವನತ್ತಿಡ್ದ. ಒಂದೊನ್ನೆ ನೀರು ಕುಡ್ದ ಅವುನು, ಸಣ್ಣಕ್ಕ ನೀರಿನು ಜೊತೆಗೆ ಮಜ್ಜಿಗೆನೂ ತರದಲ್ವಾ ಎಂದ.

ಇಲ್ಕಣಯ್ಯೋ, ಕರೇವ್ನ ಎಮ್ಮೆ ಒದ್ಕಂದು ಕೋಣನ್ನ ತಗಂಡದೆ. ಇನ್ನೇನು ಹೊತ್ರಿಕೊ ಬೈಯಿಂದ್ಕೊ ಈಯಂಗಾಗೇತೆ ಅಂತಂದು ಸಣ್ಣಕ್ಕ ಸೊಂಟ್ದಾಗಿದ್ದ ಎಲಡಿಕೆ ಚೀಲವಾ ಈಸೀಕೆ ಇರಕಂಡ್ಲು. ನಮ್ದೇನೇಳನಪ್ಪ ಚಂದಾವಾ. ಎಮ್ಮಿಗೆ ಈಯೋ ಆಸೆ ಕ್ವಾಣಗೆ ಕೇಯೋ ಆಸೆ ಅನ್ನಂಗೆ ನಮ್ಮ ಬದುಕಿನ ಪಾಡು ಹೊಲಕೋಟು ಮನಿಗೋಟು. ಆರುಕ್ಕ ಅತ್ಲಿಲ್ಲ ಮೂರುಕ್ಕಿಳಿಲಿಲ್ಲ. ಹೋದ್ರು ಬಂದಂಗಿದಿವಿ ನರಕಲಿ ಮೇಲೆ ಜನ್ಮ ವರಕಂಡು. ಏಸೊಂದಿನ ಆದ್ಮೇಲೆ ಬಂದಿಯಾ ಶಂಕರಯ್ಯ ಕುಲುಮೆ ಕೆಲ್ಸ ಬಿಟ್ಟು ಅರಗಾಗಂಗಿಲ್ವೇನೋ. ಯಂಗೊ ನಿಂದೆ ಪಾಡು ಕಣಯ್ಯ ಅಂತವಾ ಸಣ್ಣಕ್ಕ ಹೊಲಾದಿ ನೆಡದು ದಣವಾದಳಂಗಾಗಿ ಬಿಸುಲು ದಗಿ ಅಂತವಾ ಮುಂಜೆರಗು ಮುಂದು ಮಾಡಿ ಗಾಳಿ ಬೀಸ್ಕಂತಾ ಕುಂತ್ಲು. ಅದೇನೊ ನೆನಿಸ್ಕಂಡಳಂಗೆ ಶಂಕರಯ್ಯನ ಕಡೆ ತಿರುಗಿ ಅವ್ನು ಮಖನೆ ಆತ್ಕಂಡಳಂಗೆ ಶಂಕರಯ್ಯ ಸಿಪ್ಪನು ಗೋರಿಲಿ ಹಿಟ್ನ ಸ್ವಾರೆ ತಳ ಗೋರಂಗಾಗೈತೆ. ಒಂದ್ಕೆರೆ ಬಿಲ್ಲೆ ಮಾಡಿಕೊಡು‌ ಅಂತ ಕೇಳಿದ್ದೆ. ವರ್ಷವೇ ಆತಲ್ಲಯ್ಯಾ, ಈ ವರ್ಷಲಾರ ಮಾಡ್ಕೊಡಯ್ಯ ಕೆರಿಯೋಲೆಯಾ ಅಂದ್ಲು ಸಣ್ಣಕ್ಕ. ಆಮ್ಯಾಲೆ ಗ್ಯಾನ್ಕತ್ತಿದಳಂಗೆ ಈ ವರ್ಷ ಆಯ್ಕೂವೆ ಬರಲಿಲ್ಲ. ನಿನ್ನವು ರಾಗಿರಬುಟೆ ಅಂಗೆಯಾ ಅವೆ. ಹಟ್ಟಿಗೆ ಬಂದೋಗು ಅಂತಂದ್ಲು ಸಣ್ಣಕ್ಕನೂವೆ, ಶಂಕರಯ್ಯ ಮರತನು ಅಂತವಾ.

ನೋಡವ್ವು ಸೂಲ್ದಮ್ಮ ಇವರ್ಸ ಮಗಳು ಮದುವೆ. ಅತ್ತಲಾಗಿ ಅವ್ಳು ಬಾಣಿತನ ನೆಡುದುದ್ದೇ ಆದ್ರೆ, ಅವ್ಳು ಹೆರಿಗೆ ಮಾಡಿಕೊಡು. ಈ ವರ್ಸ ನಿನ್ನವೇನು ಆಯ್ದರಾಗಿ ಬ್ಯಾಡ ಎಂದ.

ಸಣ್ಣಕ್ಕ ಊರಾಗಟ್ಟೇಗೆ ಹೆಂಗಸ್ರುನ್ನ ಹೆರಿಗೆ ಮಾಡುಸ್ತಿದ್ದುದ್ದರಿಂದವಾ ಅವುರೆಲ್ಲಾ ಸಣ್ಣಕ್ಕನ್ನ ಸೂಲ್ದಮ್ಮ ಸೂಲ್ದಮ್ಮ ಅಂತಿದ್ರು. ಅಯ್ಯೋ, ಹೆರಿಗೆ ಮಾಡಕೆ ನಾ ಯಾರತವುನೂ ಯಾವತ್ತೂ ಯೆಚ್ಚ ಕೇಳ್ದಳಲ್ಲಾ. ನಿನ್ನೊವು ಯಾಕಪ್ಪ ಆಯ್ದುರಾಗಿ ನಮ್ಗೆ. ವರ್ಸವರಿಯಾ ಕುಲುಮೆ ಕೆಲ್ಸ ಮಾಡಿಕೊಟ್ಟೀಯಾ, ಮನಿಗು ಬಂದು ರಾಗಿ ಅವೆ ತಗೊಂಡೋಗು ಅಂತಂದ್ಲು ಇನ್ನೊಂಸಲ.

ಮದವೆ ಹತ್ರ ಮಾಡ್ಕಂಡು ಬಾ. ಇಸು ಕಾಳುಕಡ್ಡೀನೂವೆ ಕುಂಡೋಗುವಂತೆ. ಉಂಡವುರೆಕಾಳು, ಒಣುಳ್ಳಿಕಾಳು, ಮಣ್ಣಿಕ್ಕಿರೋವು ತೊಗರಿಕಾಳು, ಪಲಾರದು ಕಾಳಿಗೆ ಹೆಸ್ರು ಕಾಳು ಕುಂಡೋಗುವಂತೆ ಶಂಕರಯ್ಯ, ಮದುವೆ ಹತ್ರುಬೀಳ ಬಂದೋಗು ಎಂದೇಳಿದ ಬಸವಯ್ಯ ಗ್ಯಾನುಕು ತಿಳ್ದನಂಗೆ ಮತ್ತೆ ಮಾತಾಡ್ತವಾ, ಕುಲುಮೆ ಇಕ್ಕಲ್ಲ ಅಂತವಾ ದಿಗಲು ಬೀಳುಬೇಡಾ. ಯಂಗೊ ಭಗವಂತ ಸಾಗುಸ್ತಾನೆ. ನಾವೂವೆ ಹೊತ್ತೋದಂಗೆ ಕೊಡಿ ಹಿಡಿಬೇಕಲ್ಲ ಶಂಕರಯ್ಯ. ನಮ್ಮ ಬಾಳೇನು ವೈನಾಗಿಲ್ಲ. ಕಾಯಿಲೆ ಕಸಾಲಾಗಿ ಕುರಿ ಅಡಕುವಾದುವು. ಬೋರುಮಿಲ್ಲು ಬತ್ತಿ ಇದ್ದಾವು ತೆಂಗಿನ ಮರ ಒಣಗಿವು. ಅಪ್ಪನು ಕಾಲ್ದಾಗೆ ಕುರಿ ಬಂಡ ಕತ್ರಸಾಕೆ ಕುರುಬುರು ಬರೋರು. ಅವ್ರು ಬಂಡ ತಗಂಡು ಹಿಂಡಿಗೆ ಹಾಲು ತುಪ್ಪ ತೊಳಿಯೋರು. ಏನು ಅವ್ರು ಕೈ ಗುಣುವೊ. ಉದಿ ಹೆಚ್ಚೋದು. ಬಂಡ ತಗೊಂಡೋದೋರು ಕಂಬಳಿಕೊಡೋರು. ಇಂಗೆಯಾ ನಡ್ದು ಬಂದಿತ್ತು ಅಜ್ಜಮುತ್ರು ಕಾಲ್ದಿಂದವಾ. ಪಾಪ ಅವ್ರುಗೇನು ಲಾಸಾತೋ ಏನೋ ಈಗೀಗ ಬರೋದೆ ಕೈ ಬಿಟ್ರು. ಹಿಸ ಬೀದಿ ಕುರುಬುರು ಕೇರಿ ಒಳಿಗೆ ಕಂಬಳಿ ನೇಯರೇ ಕಮ್ಮಿ ಆಗೆವುರೆ. ಬಂಡ ಕೇಳೋರೂ ಇಲ್ಲ ಚರ್ಮಕೊಳ್ಳೋರೂವೆಯೂ ಇಲ್ಲ. ಸಾವುರಾರೂಪಾಯಿ ಬಂಡ ಚರ್ಮ ಬಿಸಾಡ್ತೀವಿ. ನಾಯಿ ಎಳ್ದಾಡ್ಕಂಡು ತಿನ್ನಂಗಾಗೈತೆ ನಮ್ಮು ಬದುಕುವಾ. ಕುರಿ ಬಂಡ ತೆಗಿಯೋರಿಗೆ ಕೂಲಿ ಕೊಡ್ತೀವಿ. ಅವ್ರು ಬಂಡ ಬ್ಯಾಡವೇ ಬ್ಯಾಡ ಅಂತಾವುರೆ. ಮಾಂಸಕ್ಕೆ ಒಳ್ಳೆ ಧಾರಣೆ ಬಂದೈತೆ. ಕುರಿ ಮೇಸೊಕೆ ಜಾಗಿಲ್ಲ. ಅದ್ಯಾವ್ದೊ ಜಿಲ್ಲೆಗೆ ಕುಡಿಯೊ ನೀರಿಗೆ ಹೊಳೆ ನೀರು ಹರುಸ್ತೀವಿ ಅಂತವಾ ಸರ್ಕಾರದೋರು ಹೊಲ್ಕ ಅಳತೆ ಕಲ್ಲಾಕವುರೆ. ಇದ್ದ ಇಟೊ ಒಟೊ ಅಂಗೈ ಗುಣಿ ಅಗಲ ಅನ್ನು ಹೊಲವೂ ಹೊಳೆ ತೆಗಿಯೋಕೆ ಹೋಗುತ್ತೆ. ವರ್ಸೊಂಭತ್ಕಾಲುವೂ ಕಣ್ಮುಂದೆಯಾ ಹೊಲಿರೋದು. ಮಳಿಗಾಲ ನೆಡದರೆ ಕಾರದ ಬಾಯಿಗೆ ಈಸು ಕಾಳಾಗವು. ಕುರಿ ಅಡ್ಡಾಡ್ಸಕೆ ಜಾಗಿಲ್ಲ. ಅಂಗೈಯ್ಯಗಲ ಹೊಲವೂ ಕೈ ಬಿಟ್ಟೋಗುತ್ತೆ. ಕಸುಬುಗುಳು ಕೈ ಬಟ್ಟವೆ ಶಂಕರಯ್ಯ. ದಾಸಪ್ಪನು ಮನಿಗೆ ಇನ್ನೊಬ್ಬ ದಾಸಪ್ಪ ಬಂದರೆ ನಿಂದಾಸಪ್ಪ ನನ್ದು ಹೊದಿಯಪ್ಪಾ ಅನ್ನಂಗಾಗೈತೆ ಅಂತಂತಲೇಯಾ ಬೆಟ್ಟಾಡಿ ನೆಲ ಬರಿತಾ ಮಾತಾಡ್ತಲೇ ಇದ್ದ ಬಸವಯ್ಯ.

ಗಾಳಿ ಬೀಸೊ ಮಖ ಅತ್ಲಿಂದವಾ ಹೊಸಕಟ್ಟೆ ಏರಿ ಹಿಂದೆ ಜನ ಕೂಗಾಡ್ತಿರೊಂಗೆ ಕೇಳುಸ್ತು ಇಬ್ರೀಗೂವೆ. ಯಾರಿರಬಹುದು ಎಂದು ಬಸವಯ್ಯ ಅಂದಾಜು ಮಾಡ್ಕೊಂಡು, ತಾನೇ ಆ ಕಡೆ ಮಖ್ದಾಗೆ ಕುರಿ ಮುಂದಿದ್ದ ಮೊಮ್ಮಗ ವಾಸು ಕಡೆ ನೋಡಿ, ವಾಸಾ ವಾಸಾ ಯಾರು ಜಗಳಾಡಂಗೆ ಕೇಳುತ್ತೆ ಮುಂಗಾರೊಲುಕ್ಕೆ ಕುರಿ ಹೋದ್ವಾ ಎಂದು ಬಸವಯ್ಯ ಮೊಮ್ಮಗನ ಕಡೆ ಮನಸಾದ. ಒಟೊಂದೊತ್ತು ಮಾತಾಡಿದ್ದ ಕುಲುಮೆ ಶಂಕರಯ್ಯ ಊರು ಕಡೆ ಹೋಗಲು ಅವುನೂವೆ ಕೂತುತಾವ್ಲುಲಿಂದವಾ ಎದ್ದೇಳೊಕೋದ. ಆ ಕಡಿಯಿಂದ ವಾಸು ತಾತುನ್ನ ಕೂಗಿ ಸಿದ್ದನಂಜಯ್ಯ ಯಾರ ಜೊತೆಗೊ ಜಗಳಕಾಯುತ್ತೆ. ಜನವುರೆ ತಾತ. ಅದ್ಯಾರೊವಾ ಜೀಪಾಕೆಂಡು ಬಂದವುರೆ ಐದಾರು ಜೀಪಿನೋರು. ಅವ್ರು ಕೂಟೆ ಸಿದ್ದನಂಜಯ್ಯ ಒಂದೆಯಾ ಜಗಳಕ್ಕೆ ಬಿದೈತೆ ಎಂತವಾ ವಾಸು ಕೂಗೇಳಿದ್ದು ಬಸವಯ್ಯನಿಗೆ ಅರುವಾತು. ಇಂತದೇ ಇರಬೇಕು ಅಂತಂದು ಅರ್ಥವಾದಂತಿತ್ತು ಅವುನಿಗೆ. ಅಲ್ಲಿ ಯಾವ ಮಾತಿಗೆ ಜಗಳಾಗುತ್ತೆ ಎಂದು ಬಸವಯ್ಯ ಗೊತ್ಮಾಡಿಕೊಂಡ.

ಸರ್ಕಾರದೋರು ಬೋಕ್ಯಾಳ್ರು ಶಂಕರಯ್ಯ. ರೈತರು ಕಡೆಯಿಂದ ಭೂಮಿ ಕಿತ್ಕಳಾಕೆ ಬಂದವುರೆ. ಸಿದ್ದನಂಜಯ್ಯನ ತಾತುನು ಕಾಲುದ್ದು ಆಸ್ತಿ ಅದು. ಹೊಳೆತೆಗಿಯೋಕೆ ಭೂಮಿ ಅಳ್ತಿಗೆ ಬಂದವುರೆ ಸರ್ವೇರು. ಅದೆಯಾ ಅಲ್ಲಿ ನೆಡಿಯೊ ಗಲಾಟೆ. ಸಿದ್ದನಂಜಯ್ಯಂದು ಅವ್ರು ಜೊತೆಗೆ ದಿನಬೆಳಗಾದ್ರೆ ಬಡುದಾಟ. ಅವುನಿಲ್ದಾಗ ಸರ್ವೇರು ಬಂದು ಅಳತೆ ಕಲ್ಲು ನಡುತಾರೆ ಸಿದ್ದನಂಜಯ್ಯ ನಟ್ಟ ಕಲ್ಲು ಕಿತ್ತಾಕ್ತಲೇ ಅವುನೆ. ಭೂಮಿ ಬಿಡಕಾಗಲ್ಲ ಕೋರ್ಟಿಗೆ ಹೋಗತೀನಿ ಅಲ್ಲಿಗುಮುಂಟವಾ ಸರ್ವೆ ಆಗ ಕೂಡ್ದು. ಲೋಟೀಸ್ ನೀಡ್ದೆ ನೀವೆಂಗೆ ಹೊಲುಕ್ಕೆ ಬಂದ್ರಿ, ಬರಬಾರದು; ಅಂತವಾ ಈ ಬಾರಕಾಲೆಲ್ಲಾವ ಸಿದ್ದನಂಜಯ್ಯ ಗುತ್ತಿಗೆ ಕಂಪಿನಿಯೋರಿಗೆ ತಂಟೆ ಮಾಡೆವುನೆ. ಗುತ್ತಿಗೆದಾರು ಕಡೆಯಿಂದ ದುಡ್ಡು ತಿಂದು ಇಂಜಿನಿಯರ್ ಮೂರ್ತಯ್ಯಾ ಅಂತವಾ ಅವುನು ಆಗಾಗ ಸರ್ವೇರು ಷಡಯ್ಯನು ಜೊತೆಯಲ್ಲಿ ಬರುತಾನೆ ಭೂಮಿ ಅಳಸೋಕೆ. ಜಮೀನು ಕೊಡೊಕೆ ಒಪ್ಪುದೋರು ಗುತ್ತಗೆದಾರು, ಸರ್ವೇರು ಇಂಜಿನಿಯರ್ ಗಳುನ್ನಾ ಹೊಲಕ್ಕು ನುಗ್ಗೋ ಕಳ್ಗುರಿ ಓಡ್ಸೋ ತರವಾಗಿ ಅವುರುನ್ನ ಓಡುಸ್ತಾರೆ‌. ಕಣ್ಣಿಲ್ದ ಸರ್ಕಾರ, ನೋಡಲ್ಲ ಕೇಳಲ್ಲ ಮುಂದಾಗಿ ಹೇಳಲ್ಲ. ನಮ್ದೂವೆ ಅದೇ ಪಾಡು. ಲೋಟೀಸ್ ನೂವೆ ಕೊಟ್ಟಿಲ್ಲ. ಇಷ್ಟು ಕೊಡುತೀವಿ ಅಂತಲೂ ಹೇಳ್ತಿಲ್ಲ. ಸರ್ಕಾರದೋರು ಎಷ್ಟು ಕೊಟ್ಟರೇನು? ಭೂಮಿ ಸಿಗಬೇಕಲ್ಲ? ಮರಮಂಡಿ ಲೆಕ್ಕ ಮಾಡಿಲ್ಲ. ನಮ್ದು ಎಷ್ಟು ಭೂಮಿ ಹೋಗುತ್ತೆ ಅಂತವಾ ನಮ್ಗೇ ಗೊತ್ತಿಲ್ಲ. ದರ್ಕಾಸಲ್ಲಿ ಹಿಡ್ದು ಜಮೀನು, ಪಿತ್ರಾರ್ಜಿತವಾಗಿ ಬಂದ ಆಸ್ತಿಗಳು, ಗೋಮಾಳ್ದ ಜಾಗದಲ್ಲಿ ಹೊಳೆ ತೆಗಿತವುರೆ. ಕುರಿ ಅಡ್ಡಾಡದೆಲ್ಲಿ. ದನಕರ ಮೇವಾಡದೆಲ್ಲಿ. ಇನ್ನ ಮುಂದೆ ದನಕುರಿ ಕಟ್ಕಂಡು ಬಾಳಕಾಗಲ್ಲ ಬಿಡು, ಮತ್ತೆ. ಭೂಮಿ ಕಳಕಣೋರು ಪಾಡು ಹೇಳತೀರುದು ಎನ್ನುತ್ತಲೇ ಶಂಕರಯ್ಯನ ಕೂಡವಾ ಬಸವಯ್ಯನೂವೆ ಎದ್ದು ಸಿದ್ದನಂಜಯ್ಯನ ಹೊಲ್ದ ಕಡೆ ಮುಖ ಮಾಡ್ದ. ಇವ್ರು ಮಾತ ಆಲುಸ್ತಲೇ ಕುಳುತಿದ್ದ ಸಣ್ಣಕ್ಕ ಎದ್ದು ಇಳಿ ಹತ್ತಾತು ಅಂತವಾ ಎದುರುಗಡೆ ಕೆಳಗುಲು ಪಟ್ಟೆಯೊಳಿಗೆ ಸೊಪ್ಪು ಕೊಯ್ಯನಾಂತ ಕೆಳನೆಲುಕ್ಕೆ ಇಳ್ಕಂಡ್ಳು.

ಪರೂಡಿ ಜನ ದರೂಡಿ ಮ್ಯಾಲೆ ಬಂದು ಹೊಲ ಅಳಿತವುರೆ. ಅಳತೆ ಮಾಡಿ ಕತ್ರಸೋಕೇನು ಹೊಲ no ತಾನೊಳುಗ್ಲು ಅಂಗಿ ಬಟ್ಟೋ ನಿ
ಪರೂಡಿ ಜನ ದರೂಡಿ ಮ್ಯಾಲೆ ಬಂದು ಹೊಲ ಅಳಿತವುರೆ. ಅಳತೆ ಮಾಡಿ ಕತ್ರಸೋಕೇನು ಹೊಲ ತಾನೊಳುಗ್ಲು ಅಂಗಿ ಬಟ್ಟೋ ನಿ

ಮಾಳ್ನೆ ದಿನ ಪೊಲೀಸ್ರು ಬಂದು ಸಿದ್ದನಂಜಯ್ಯನ್ನ ಜೀಪ್ನಗೆ ಎತ್ತಾಕೆಂಡೋಗಿ ಸ್ಟೇಷನ್ನಾಗೆ ಇಟ್ಕಂಡ್ರು.‌ ಎಲ್ಡು ಮೂರುದಿನುವಾದ್ರೂ ಹೊರಿಕೆ ಅಂತವಾ ಬಿಡ್ದಂಗೆ ಸ್ಟೇಷನ್‌ನಗೇ ಹಿಟ್ಕಂಡು ಅವ್ನು ಹಿಟ್ಟುಸೊಪ್ಪು ನೋಡ್ಕಂಡ್ರು. ಅವ್ನಿಗೆ ಅಲ್ಲೇ ಅನ್ನಾ ನೀರು ತೋರಿದ್ರು. ಇತ್ತಲಾಗಿ ಬೆಟ್ಟದೊಳುಗುಲಿಂದವಾ ಹೊಲ್ಟು ಬಂದ ಒಳ್ಳೆ ಉಗ್ರಾದ ಹೆಬ್ಬುಲಿಯಂತ, ಆನೆ ಗಾತ್ರದ ಇಟಾಚಿಗಳು ಸಿದ್ದನಂಜಯ್ಯನ ಹೊಲ್ಕು ಬಂದು ಇಳ್ಕಂಡುವು. ಹಾಗೆ ಬಂದ ಮಿಸಿನ್ನುಗುಳು ಅವ್ನು ಹೊಲ್ದ ನೆಲನೆಲ್ಲಾ ಎಬ್ಬಿ ಹೊಳೆ ತೋಡ್ತಿದ್ದುವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?